Mobile; ಹತ್ತಿಸಿಕೊಂಡ ಮೇನಿಯಾ ಬಿಟ್ಟೋಗುತ್ತಾ!... ಕುಮಟಾ ಕಾಲೇಜಲ್ಲಿ ಮೊಬೈಲ್ ರೇಡ್!

* ಆನ್‌ಲೈನ್ ಕ್ಲಾಸ್ ಹಿನ್ನೆಲೆ ಮೂಲಕ ವಿದ್ಯಾರ್ಥಿಗಳ ಕೈಗೆ ಬಂದಿದ್ದ ಮೊಬೈಲ್ 
* ಭೌತಿಕ ತರಗತಿ ಆರಂಭವಾದ್ರೂ, ಕಡಿಮೆಯಾಗದ ಮೊಬೈಲ್ ಬಳಸುವ ಅಭ್ಯಾಸ
* ತರಗತಿಯಲ್ಲೂ ಚಾಟಿಂಗ್, ಫೇಸ್ ಬುಕ್ ಹಾಗೂ  ಯುಟ್ಯೂಬ್‌ನಲ್ಲಿ ಕಾಲಹರಣ
* ವಿದ್ಯಾರ್ಥಿಗಳ ಮೊಬೈಲ್‌ಗಳನ್ನು ವಶಪಡಿಸಿಕೊಂಡು ಬಿಸಿ ಮುಟ್ಟಿಸಿದ ಸಿಬ್ಬಂದಿ
* ತಪಾಸಣೆ ನಡೆಸಿದ ಶಿಕ್ಷಕರಿಂದ ಸುಮಾರು 250ಕ್ಕೂ ಹೆಚ್ಚು ಮೊಬೈಲ್‌ಗಳು ವಶಕ್ಕೆ

First Published Nov 17, 2021, 9:30 PM IST | Last Updated Nov 17, 2021, 9:32 PM IST

ಕುಮಟಾ(ನ. 17)  ಕೋವಿಡ್ (Coronavirus) ಮಹಾಮಾರಿಯಿಂದ ಶಾಲಾ- ಕಾಲೇಜುಗಳ (School) ಬಾಗಿಲು ಮುಚ್ಚಿ ಆನ್‌ಲೈನ್ (Online) ಕ್ಲಾಸ್ ಪ್ರಾರಂಭದ ಮೂಲಕ ಮಕ್ಕಳ ಕೈಗೆ ಮೊಬೈಲ್ (Mobile) ಬರುವಂತಾಗಿತ್ತು. ಆದರೆ, ಇದೀಗ ಶಾಲಾ- ಕಾಲೇಜುಗಳಲ್ಲಿ ಭೌತಿಕ ತರಗತಿಗಳು ಪ್ರಾರಂಭವಾದ್ರೂ, ಪಾಠ ಕೇಳುವುದಕ್ಕಿಂತ ಮೊಬೈಲ್ ಬಳಸುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಕುಮಟಾದ ಕಾಲೇಜೊಂದರಲ್ಲಿ ತಪಾಸಣೆ ನಡೆಸಿದ ಶಿಕ್ಷಕರು ಸುಮಾರು 250 ಕ್ಕೂ ಹೆಚ್ಚು ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಬಸ್ ನಲ್ಲಿ ಕಿರಿಕಿರಿಯಾಗುವಂತೆ ಮೊಬೈಲ್ ಬಳಸಿದ್ರೆ ಕೆಳಗೆ ಇಳಿಸ್ತಾರೆ ಹುಷಾರ್!

ಹೌದು, ಕುಮಟಾ ಪಟ್ಟಣದ ಹನಮಂತ ಬೆಣ್ಣೆ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರು ತರಗತಿಗೆ ಆಗಮಿಸಿದ್ರೂ ವಿದ್ಯಾರ್ಥಿಗಳು ಮಾತ್ರ ಮೊಬೈಲ್ ಹಿಡಿದುಕೊಂಡು ಚಾಟಿಂಗ್, ಫೇಸ್ ಬುಕ್ ಹಾಗೂ  ಯುಟ್ಯೂಬ್ ಗಳಲ್ಲಿ ಕಾಲಹರಣ  ಮಾಡುತ್ತಿದ್ದರು‌. ಇದು ಪ್ರಾಂಶುಪಾಲರ ಗಮನಕ್ಕೆ ಬಂದಿದ್ದು,  ಎಲ್ಲಾ ವಿದ್ಯಾರ್ಥಿಗಳ ಮೊಬೈಲ್‌ ಗಳನ್ನು ವಶಪಡಿಸಿಕೊಂಡು ಬಿಸಿ ಮುಟ್ಟಿಸಿದ್ದಾರೆ. ಇನ್ನು ಪಾಲಕರು ಖುದ್ದಾಗಿ ಬಂದು ಅವರವರ ಮಕ್ಕಳ ಮೊಬೈಲ್ ತೆಗೆದುಕೊಂಡು ಹೋಗಲು ಪ್ರಾಂಶುಪಾಲರು ಸೂಚಿಸಿದ್ದಾರೆ. ಆದರೆ, ಕೆಲವು ವಿದ್ಯಾರ್ಥಿಗಳು ಕಂಡ ಕಂಡವರನ್ನು ಪಾಲಕರೆಂದು ಹೇಳಿ ಮೊಬೈಲ್ ಪಡೆಯುವ ಪ್ರಯತ್ನ ಮಾಡಿ ಸಿಕ್ಕಿ ಬಿದ್ದ ಪ್ರಕರಣವೂ ನಡೆದಿದೆ. ಪ್ರಾಂಶುಪಾಲರು ಹೇಳೋ ಪ್ರಕಾರ, 'ತರಗತಿ ಆರಂಭವಾಗುವುದಕ್ಕೆ ಮುನ್ನವೇ  ಶಾಲಾ ಕೊಠಡಿಗಳಲ್ಲಿ ಮೊಬೈಲ್ ಬಳಸಬಾರದೆಂದು ವಿದ್ಯಾರ್ಥಿಗಳಿಗೆ ತಾಕೀತು ಮಾಡಲಾಗಿತ್ತು. ಮುನ್ನೆಚ್ಚರಿಕೆಯ ಹೊರತಾಗಿಯೂ ವಿಧ್ಯಾರ್ಥಿಗಳು ಮೊಬೈಲ್ ಬಳಸಿದ್ದರಿಂದ ವಶಪಡಿಸಿಕೊಂಡಿದ್ದೇವೆ' ಎಂದು ಕಾಲೇಜು ಪ್ರಾಂಶುಪಾಲ ಸತೀಶ ನಾಯ್ಕ ತಿಳಿಸಿದ್ದಾರೆ.