ಶುಭ ಸುದ್ದಿ; ಆಗಸ್ಟ್ ವೇಳೆಗೆ ಭರ್ತಿಯಾದ ಕಬಿನಿ ಜಲಾಶಯ

ಕೇರಳದ ವಯನಾಡು ಭಾಗದಲ್ಲಿ ಭಾರೀ ಮಳೆ/ ಕಬಿನಿಗೆ ಹರಿದು ಬಂದ ನೀರು/ ಜಲಾಶಯ ಬಹುತೇಕ ಭರ್ತಿ/ 16.97  ಟಿಎಂಸಿ ನೀರು ಈಗಾಗಲೇ ಸಂಗ್ರಹ

First Published Aug 5, 2020, 8:27 PM IST | Last Updated Aug 5, 2020, 8:43 PM IST

ಮೈಸೂರು (ಆ.05)  ಕೇರಳದ ವಯನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು ಕಬಿನಿ ಜಲಾಶಕ್ಕೆ ಅಪಾರ ನೀರು ಹರಿದು ಬರುತ್ತಿದೆ.  40  ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.

ಮಲೆನಾಡಿನಲ್ಲಿ ಮುಂದುವರಿದ ವರುಣನ ಆರ್ಭಟ, ಇನ್ನೆಷ್ಟು ದಿನ?

ಜಲಾಶಯದ ಮಟ್ಟ ಕೂಡ 2279.87 ಅಡಿಗೆ ಏರಿದೆ. ಜಲಾಶಯದ ಗರಿಷ್ಠ ಮಟ್ಟ 2284 ಅಡಿ. ಜಲಾಶಯದ ಒಟ್ಟು ಸಂಗ್ರಹಣಾ ಸಾಮರ್ಥ್ಯ 19.55 ಟಿಎಂಸಿ ಇದ್ದು 16.97  ಟಿಎಂಸಿ ನೀರು ಈಗಾಗಲೇ ಸಂಗ್ರಹವಾಗಿದೆ.