ದತ್ತಪೀಠದಲ್ಲಿ ಮುಗಿಯದ ಅರ್ಚಕರ ವಿವಾದ: ನ್ಯಾಯಾಂಗ ನಿಂದನೆಯ ಎಚ್ಚರಿಕೆ ನೀಡಿದ ಮುಸ್ಲಿಮರು
ಚಿಕ್ಕಮಗಳೂರಿನಲ್ಲಿ ದತ್ತಪೀಠ ಸಂಘರ್ಷ ಇನ್ನು ಮುಗಿದಿಲ್ಲ. ದತ್ತಜಯಂತಿ ಮುಗಿದರೂ, ಅರ್ಚಕರ ವಿವಾದ ತಾರಕಕ್ಕೇರಿದೆ.
ದತ್ತ ಮಂದಿರದಲ್ಲಿ ಹಿಂದೂ ಅರ್ಚಕರ ಪೂಜೆಗೆ ವಿರೋಧ ವ್ಯಕ್ತವಾಗಿದ್ದು, ಅರ್ಚಕರ ಪೂಜೆ ಅಸಿಂಧುಗೊಳಿಸುವಂತೆ ಮುಸ್ಲಿಮರು ಒತ್ತಾಯಿಸಿದ್ದಾರೆ. ಈ ಹಿಂದಿನ ಪದ್ಧತಿಯನ್ನೇ ಮುಂದುವರಿಸಬೇಕೆಂದು ಆಗ್ರಹಿಸಿದ್ದಾರೆ. ಮೂರು ದಿನಕ್ಕೆ ಮಾತ್ರ ಅರ್ಚಕರ ಪೂಜೆ ಎಂದು ಕೋರ್ಟ್ ಹೇಳಿದೆ. ದತ್ತ ಪೀಠದಲ್ಲಿ ಮುಜಾವರ್ ಮಾತ್ರ ಪೂಜೆ ಮಾಡಬೇಕು. ದತ್ತ ಜಯಂತಿ ಮುಗಿದರೂ ಅರ್ಚಕರಿಂದ ಪೂಜೆ ಮಾಡಿಸುತ್ತಿದ್ದಾರೆ. ನ್ಯಾಯಾಂಗ ನಿಂದನೆ ಕೇಸ್ ದಾಖಲಿಸೋದಾಗಿ ಎಚ್ಚರಿಕೆ ನೀಡಲಾಗಿದೆ. ಜಿಲ್ಲಾಡಳಿತ ಕೋರ್ಟ್ ಆದೇಶವನ್ನು ಉಲ್ಲಂಘಿಸಿದೆ ಎಂದು ಮುಸ್ಲಿಂ ಮುಖಂಡರು ಆರೋಪ ಮಾಡಿದ್ದಾರೆ.
Shivamogga: ರೌಡಿಶೀಟರ್‌ಗಳಿಂದ ಮಹಿಳೆ ಮೇಲೆ ಹಲ್ಲೆ, ಕಾರಿಗೆ ಬೆಂಕಿ