Omicron Effects on Tourism: ಒಮಿಕ್ರಾನ್ ಭೀತಿ, ಪ್ರವಾಸೋದ್ಯಮಕ್ಕೆ ಹೊಡೆತ ಬೀಳುವ ಆತಂಕ

ಉತ್ತರಕನ್ನಡ (Uttar Kannada) ಜಿಲ್ಲೆ ತಾನು ಹೊಂದಿರುವ ಹತ್ತು ಹಲವು ಪ್ರವಾಸಿ ತಾಣಗಳ (Tourist Place) ಮೂಲಕವೇ ರಾಜ್ಯ, ಹೊರ ರಾಜ್ಯಗಳಲ್ಲಿ ಖ್ಯಾತಿ ಪಡೆಯುವುದರ ಜತೆಗೆ ವಿದೇಶಿ ಪ್ರವಾಸಿಗರನ್ನು ಸೆಳೆದಿದೆ. 

Share this Video
  • FB
  • Linkdin
  • Whatsapp

ಕಾರವಾರ (ಡಿ. 03): ಉತ್ತರಕನ್ನಡ (Uttar Kannada) ಜಿಲ್ಲೆ ತಾನು ಹೊಂದಿರುವ ಹತ್ತು ಹಲವು ಪ್ರವಾಸಿ ತಾಣಗಳ (Tourist Place) ಮೂಲಕವೇ ರಾಜ್ಯ, ಹೊರ ರಾಜ್ಯಗಳಲ್ಲಿ ಖ್ಯಾತಿ ಪಡೆಯುವುದರ ಜತೆಗೆ ವಿದೇಶಿ ಪ್ರವಾಸಿಗರನ್ನು ಸೆಳೆದಿದೆ. 

Vaccine Politics: ಲಸಿಕೆ ಅಭಿಯಾನಕ್ಕೆ ಹಿನ್ನಡೆಯಾಗಲು ವಿಪಕ್ಷಗಳೇ ಕಾರಣ: ಸಂಸತ್‌ನಲ್ಲಿ ತೇಜಸ್ವಿ ಗುಡುಗು!

ಕಳೆದೆರಡು ವರ್ಷಗಳಿಂದ ಕೊರೊನಾ (Covid 19) ಅಬ್ಬರ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆ ಮೇಲೆ ಸಾಕಷ್ಟು ಹೊಡೆತ ನೀಡಿತ್ತು. ಸದ್ಯ ವಿವಿಧೆಡೆಯಿಂದ ಆಗಮಿಸುತ್ತಿರುವ ಪ್ರವಾಸಿಗರಿಂದಾಗಿ ಸುಧಾರಿಸಿಕೊಳ್ಳುತ್ತಿರುವ ಪ್ರವಾಸೋದ್ಯಮಕ್ಕೆ ಕೊರೊನಾ ಮೂರನೇ ಅಲೆಯ ಆತಂಕ ಎದುರಾಗಿದ್ದು, ಜನರಲ್ಲೂ ಭೀತಿ ಕಾಣಿಸಿಕೊಳ್ಳುತ್ತಿದೆ. ಅಲ್ಲದೇ ದಾಂಡೇಲಿ, ಗೋಕರ್ಣ, ಮುರ್ಡೇಶ್ವರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಂಬಿಕೊಂಡೇ ಸಾವಿರಾರು ಕುಟುಂಬಗಳು ಜೀವನ ಸಾಗಿಸುತ್ತಿದ್ದಾರೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವರಿಗೆ ಪ್ರವಾಸೋದ್ಯಮ ಉದ್ಯೋಗ ನೀಡಿದೆ. ಸದ್ಯ ಕೊರೋನಾದಿಂದ ಪ್ರವಾಸೋದ್ಯಮಕ್ಕೆ ಹಿನ್ನಡೆಯಾದರೆ ಸಾಕಷ್ಟು ಕಷ್ಟವಾಗಲಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ. 

Related Video