ಓಲಾ, ಉಬರ್ ಹಾಗೂ ರ‍್ಯಾಪಿಡೋಗೆ ಸರ್ಕಾರದಿಂದ ನೂತನ ದರ!
ಇಂದು ಓಲಾ, ಉಬರ್ ಕಂಪನಿಗಳ ಭವಿಷ್ಯ ನಿರ್ಧಾರವಾಗಲಿದ್ದು, ಅಗ್ರಿಗೇಟರ್ ಕಂಪನಿಗಳ ಹಣ ವಸೂಲಿಗಳಿಗೆ ಬೀಳುತ್ತಾ ಬ್ರೇಕ್ ಎನ್ನಲಾಗುತ್ತಿದೆ.
ಓಲಾ, ಉಬರ್ ಹಾಗೂ ರ‍್ಯಾಪಿಡೋಗೆ ಸರ್ಕಾರದಿಂದಲೇ ದರ ನಿರ್ಧಾರ ನಿಗದಿಯಾಗಿದ್ದು, 15 ದಿನಗಳೊಳಗೆ ಕೋರ್ಟ್ ಸೂಚನೆಯಂತೆ ಹೊಸ ದರ ಫಿಕ್ಸ್ ಆಗಲಿದೆ. ಹೊಸ ದರ ಫಿಕ್ಸ್ ಮಾಡಿರುವುದರ ಬಗ್ಗೆ ಹೈ ಕೋರ್ಟ್‌ಗೆ ಇಂದು ಸರ್ಕಾರದಿಂದ ವರದಿ ಸಲ್ಲಿಕೆಯಾಗಲಿದ್ದು, ಅ. 29ರಂದು ಅಗ್ರಿಗೇಟರ್ ಕಂಪನಿಗಳ ಜತೆ ನಡೆದ ಮೀಟಿಂಗ್'ನಲ್ಲಿ GST ಜತೆ ಹೊಸ ದರ ಫಿಕ್ಸ್ ಮಾಡಲು ಪಟ್ಟು ಹಿಡಿಯಲಾಗಿದ್ದು, ಸಧ್ಯ 2 ಕಿ.ಮೀಗೆ 30 ರೂ.ಯನ್ನು ಸಾರಿಗೆ ಇಲಾಖೆ ನಿಗದಿ ಮಾಡಿದೆ.
ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗೆ 10% ಮೀಸಲಾತಿ: ಕೇಂದ್ರದ ನಿರ್ಧಾರ ಎತ್ತಿಹಿಡಿದ ಸುಪ್ರೀಂ ಕೋರ್ಟ್