Tumakuru: ರೈತ ಕುಟುಂಬವನ್ನ ಬೀದಿಗೆ ತಳ್ಳಿದ ಅರಣ್ಯ ಇಲಾಖೆ..!

*   ಅಡಿಕೆ ಮರಗಳನ್ನ ಕಡಿದು ಹಾಕಿದ ಅರಣ್ಯ ಇಲಾಖೆಯ ಅಧಿಕಾರಿಗಳು
*   ಅರಣ್ಯ ಪ್ರದೇಶ ಒತ್ತುವರಿ ಆಗಿದೆ ಎಂಬ ಆರೋಪ
*  ಶಾರದಾ, ತಿಮ್ಮಯ್ಯ ಎಂಬುವರಿಗೆ ಸೇರಿದ ಜಮೀನು
 

First Published Mar 8, 2022, 11:01 AM IST | Last Updated Mar 8, 2022, 11:01 AM IST

ತುಮಕೂರು(ಮಾ.08): ರೈತ ಕುಟುಂಬದ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ದರ್ಪ ತೋರಿದ ಘಟನೆ ತುಮಕೂರಿನ ಅಮ್ಮನಘಟ್ಟ ಗ್ರಾಮದಲ್ಲಿ ನಡೆದಿದೆ.  20 ವರ್ಷಗಳಿಂದ ಮಕ್ಕಳಂತೆ ಬೆಳೆಸಿದ್ದ ಅಡಿಕೆ ಮರಗಳನ್ನ ಅರಣ್ಯ ಇಲಾಖೆಯ ಅಧಿಕಾರಿಗಳು ಕಡಿದು ಹಾಕಿದ್ದಾರೆ. ರೈತ ಕುಟುಂಬ ಕೈಮುಗಿದು ಬೇಡಿಕೊಂಡರೂ ಅಧಿಕಾರಿಗಳ ಮನಸ್ಸು ಮಾತ್ರ ಕರಗಲೇ ಇಲ್ಲ.  ಅರಣ್ಯ ಪ್ರದೇಶ ಒತ್ತುವರಿ ಆಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರೈತ ಕುಟುಂಬಕ್ಕೆ ಒಂದು ನೋಟಿಸ್‌ ಕೂಡ ನೀಡದೆ ಅಧಿಕಾರಿಗಳು ಮನಬಂದಂತೆ ಅಡಿಕೆ ಮರಗಳನ್ನ ನೆಲಸಮ ಮಾಡಿದ್ದಾರೆ. ಶಾರದಾ, ತಿಮ್ಮಯ್ಯ ಎಂಬುವರಿಗೆ ಸೇರಿದ ಜಮೀನಿನಲ್ಲಿ ಬೆಳೆದ ಅಡಿಕೆ ಬೆಳೆ ಸರ್ವನಾಶವಾಗಿದೆ. ಈ ಮೂಲಕ ಅರಣ್ಯ ಇಲಾಖೆಯ ಅಧಿಕಾರಿಗಳು ರೈತ ಕುಟುಂಬವನ್ನ ಬೀದಿಗೆ ತಳ್ಳಿದೆ. 

Nari Shakti Puraskar ನಾರಿ ಶಕ್ತಿ ಪುರಸ್ಕಾರ ವಿಜೇತರ ಮಾತು ಕೇಳಿ ನಕ್ಕು ನೀರಾದ ಪ್ರಧಾನಿ ಮೋದಿ

Video Top Stories