Asianet Suvarna News Asianet Suvarna News

ದಾವಣಗೆರೆ: 419 ಕುಟುಂಬಗಳ ಎತ್ತಂಗಡಿ, ಕುಡಿಯೋ ನೀರಿಗೂ ಜನರ ಪರದಾಟ..!

ಇನ್ನು ಮನೆ ಕಳೆದುಕೊಂಡ ಸಂತ್ರಸ್ತರು ರಾತ್ರಿ ಸುರಿದ ಅಕಾಲಿಕ ಮಳೆಯಿಂದ ಸಂಕಷ್ಟ ಅನುಭವಿಸುವಂತಾಗಿದೆ. ವಸತಿ ಸ್ಥಳದ ಅಕ್ಕ ಪಕ್ಕ ಗದ್ದೆ, ಕೆರೆಗಳಿದ್ದು ಸೊಳ್ಳೆ, ಹಾವು, ಚೇಳು ಕಾಟವೂ ಇದೆ. ಮಹಾ ನಗರ ಪಾಲಿಕೆ ಅಧಿಕಾರಿಗಳು ಆದಷ್ಟು ಬೇಗ ಇವರಿಗೆ ಸೂರು ಒದಗಿಸಬೇಕಿದೆ.

ದಾವಣಗೆರೆ(ಡಿ.06):  ನಗರದಲ್ಲಿ ಕಳೆದ ಐದು ದಿನಗಳ ಹಿಂದೆ ತೆರವು ಮಾಡಿದ ಹೆಗಡೆ ನಗರ ನಿವಾಸಿಗಳ ಬದುಕು ಆಯೋಮಯವಾಗಿದೆ. ಪಿ.ಬಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಿಂಗ್ ರೋಡ್ ರಸ್ತೆ ನಿರ್ಮಾಣಕ್ಕೆ  419 ಕುಟುಂಬಗಳನ್ನು ಏಕಾಏಕಿ ಎತ್ತಂಗಡಿ ಮಾಡಿಸಲಾಗಿತ್ತು. ಇದೀಗ ಕುಡಿಯಲು ನೀರು... ಶೌಚಾಲಯ.. ಕರೆಂಟ್ ಸೌಲಭ್ಯವೂ ಇಲ್ಲದೆ ಅಕ್ಷರಶಃ ಸಂತ್ರಸ್ಥರನ್ನಾಗಿ ಮಾಡಿದೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ ನೋಡಿ..

ದಾವಣಗೆರೆ ಹಳೇ ಭಾಗದಿಂದ ಪುಣೆ ಬೆಂಗಳೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಿಂಗ್ ರಸ್ತೆ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಿದೆ.  ಇದಕ್ಕಾಗಿ ಹಲವು ವರ್ಷಗಳಿಂದ ವಾಸವಿದ್ದ ಹೆಗಡೆ ನಗರ ನಿವಾಸಿಗಳನ್ನು ಎತ್ತಂಗಡಿ ಮಾಡಿದೆ.. ವಸತಿ ವ್ಯವಸ್ಥೆ ಎಲ್ಲವನ್ನೂ ಮಾಡಿದ್ದೀವಿ.. ಅಲ್ಲಿಎಗ ಶಿಫ್ಟ್ ಆಗಿ ಎಂದು ಐದು ದಿನಗಳ ಹಿಂದೆ 419 ಕುಟುಂಬಗಳನ್ನು ಎತ್ತಂಗಡಿ ಮಾಡಿಸಿದ್ದಾರೆ.. ಆದರೆ ಮನೆ ಖಾಲಿ ಮಾಡಿದ ಕುಟುಂಬಗಳು ಈಗ ಅಕ್ಷರಶಃ ಬೀದಿಗೆ ಬಿದ್ದಿವೆ.. 

ಚಿತ್ರದುರ್ಗ: ಸರ್ಕಾರಿ ಗೋಮಾಳ ಕಬಳಿಸಲು ಅಧಿಕಾರಿಗಳು, ರಿಯಲ್ ಎಸ್ಟೇಟ್ ಏಜೆಂಟರಿಂದ ಸ್ಕೆಚ್‌?

ಐದು ದಿನಗಳ ಹಿಂದೆ 419 ಕುಟುಂಬಗಳನ್ನು ಜಿಲ್ಲಾಡಳಿತ ಎತ್ತಂಗಡಿ ಮಾಡಿಸಿತ್ತು. ಅದ್ರಲ್ಲಿ  281 ಕುಟುಂಬಗಳಿಗೆ ದೊಡ್ಡಬಾತಿಯಲ್ಲಿ ವಸತಿ ನೀಡಲಾಗಿದೆ. ಉಳಿದ 138 ಕುಟುಂಬಗಳ ಪರಿಸ್ಥಿತಿ ಅಕ್ಷರಶಃ ಸಂತ್ರಸ್ಥರನ್ನಾಗಿ ಮಾಡಿದೆ. ವಸತಿ ವ್ಯವಸ್ಥೆ ಮಾಡಿದ್ದಾಗಿ ಹೇಳಿದ ಅಧಿಕಾರಿಗಳು ಈ ಕಟುಂಬಗಳನ್ನು ಬೀದಿಗೆ ತಳ್ಳಿವೆ.  ಕುಡಿಯಲು ನೀರು... ಶೌಚಾಲ.. ಕರೆಂಟ್ ಇಲ್ಲ.. ಅಷ್ಟೇ ಅಲ್ಲ ಸರಿಯಾಗಿ ಶೆಡ್ ಕೂಡ ಇಲ್ಲ..  ಅಧಿಕಾರಿಗಳು ಪೂರ್ವ ಸಿದ್ಧತೆ ಇಲ್ಲದೇ ಮಾಡಿದ ಯಡವಟ್ಟಿನಿಂದ ಹೆಗಡೆ ನಗರ ನಿವಾಸಿಗಳು ಪರಿತಪಿಸುತ್ತಿದ್ದಾರೆ. 

ಸುಮಾರು 2,500 ಜನರ ವಸತಿಗೆ  ವಯ್ವಸ್ಥೆ ಆಗಬೇಕಿದೆ. ಒಕ್ಕಲೆಬ್ಬಿಸುವ ಮುನ್ನವೇ ಇದನ್ನೆಲ್ಲ ಮಾಡೋದು ಬಿಟ್ಟು ಒಕ್ಕಲೆಬ್ಬಿಸಿದ ಬಳಿಕ ವಸತಿ ವ್ಯವಸ್ಥೆ ಮಾಡುತ್ತಿದೆ. ಸಣ್ಣ ಸಣ್ಣ ಮಕ್ಕಳು, ಮಹಿಳೆಯರು, ಬಾಣಂತಿಯರು, ವೃದ್ಧರು ಮೇಲ್ಚಾವಣಿ  ಇಲ್ಲದ ಶೆಡ್ ನಲ್ಲಿ ರಾತ್ರಿ ಕಳೆಯುವಂತಾಗಿದೆ. 

ಇನ್ನು ಮನೆ ಕಳೆದುಕೊಂಡ ಸಂತ್ರಸ್ತರು ರಾತ್ರಿ ಸುರಿದ ಅಕಾಲಿಕ ಮಳೆಯಿಂದ ಸಂಕಷ್ಟ ಅನುಭವಿಸುವಂತಾಗಿದೆ. ವಸತಿ ಸ್ಥಳದ ಅಕ್ಕ ಪಕ್ಕ ಗದ್ದೆ, ಕೆರೆಗಳಿದ್ದು ಸೊಳ್ಳೆ, ಹಾವು, ಚೇಳು ಕಾಟವೂ ಇದೆ. ಮಹಾ ನಗರ ಪಾಲಿಕೆ ಅಧಿಕಾರಿಗಳು ಆದಷ್ಟು ಬೇಗ ಇವರಿಗೆ ಸೂರು ಒದಗಿಸಬೇಕಿದೆ.

Video Top Stories