ಹುಬ್ಬಳ್ಳಿಯಲ್ಲೂ ಕೊರೋನಾ ವೈರಸ್‌ ಭೀತಿ: ವಾಣಿಜ್ಯ ನಗರಿಯ ವ್ಯಾಪಾರಕ್ಕೆ ಬಿತ್ತು ಹೊಡೆತ

ಕೊರೋನಾ ಸೋಂಕು| ಒಂದು ವಾರ ಕರ್ನಾಟಕ ಬಂದ್| ನಗರದ ಜನತೆ ಮನೆ ಬಿಟ್ಟು ಹೊರಗೆ ಬಾರದಂತ ಪರಿಸ್ಥಿತಿ ನಿರ್ಮಾಣ| 

First Published Mar 14, 2020, 2:47 PM IST | Last Updated Mar 14, 2020, 2:47 PM IST

ಹುಬ್ಬಳ್ಳಿ(ಮಾ.14): ಕೊರೋನಾ ವೈರಸ್‌ ಹರಡದಿರಲು ಸಿಎಂ ಯಡಿಯೂರಪ್ಪ ಒಂದು ವಾರ ಕರ್ನಾಟಕ ಬಂದ್ ಆದೇಶಿದಿದ್ದಾರೆ. ಇದರಿಂದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಯೂ ಕೂಡ ಕೊರೋನಾ ಪರಿಣಾಮ ಬೀರಿದೆ. ನಗರದಲ್ಲಿ ವ್ಯಾಪಾರ ಮಾಡಲು ಜನರೇ ಇಲ್ಲದಂತಾಗಿದೆ. 

ನಗರದಲ್ಲಿ ಸಮರ್ಪಕವಾಗಿ ಮಾಸ್ಕ್‌ಗಳು ಸಿಗುತ್ತಿಲ್ಲ. ಇದರಿಂದ ಜನರು ಮತ್ತಷ್ಟು ಆತಂಕ್ಕೊಳಗಾಗಿದ್ದಾರೆ. ಅವಳಿ ನಗರದ ಜನತೆ ಮನೆ ಬಿಟ್ಟು ಹೊರಗೆ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಹುಬ್ಬಳ್ಳಿಯಲ್ಲಿ ಇದೀಗ ನೋಡಿದ್ರೂ ಖಾಲಿ ಖಾಲಿಯಾಗಿದೆ. 
 

Video Top Stories