Koppal: 300 ವಿದ್ಯಾರ್ಥಿಗಳು, ಇರುವುದು 3 ತರಗತಿಗಳು ಮಾತ್ರ, ಸರ್ಕಾರಿ ಮಾದರಿ ಶಾಲೆಯ ದುಸ್ಥಿತಿ!

- 2016ರಲ್ಲಿ ಆರಂಭವಾಗಿರುವ ಮೌಲಾನಾ‌ ಅಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ - 300 ವಿದ್ಯಾರ್ಥಿಗಳಿಗೆ ಇಲ್ಲಿ ಇರುವುದು ಕೇವಲ ಮೂರೇ ಮೂರು ತರಗತಿಗಳು ಮಾತ್ರ!- 60 ಲಕ್ಷ ಅನುದಾನ ಬಿಡುಗಡೆಯಾಗಿದ್ರೂ, ಅಧಿಕಾರಿಗಳಿಂದ ಜಾಗದ ಕೊರತೆಯ ನೆಪ- ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ 

Share this Video
  • FB
  • Linkdin
  • Whatsapp

ಕೊಪ್ಪಳ (ನ. 23): ಸರಕಾರ ಅಲ್ಪಸಂಖ್ಯಾತರ (Minority) ಮಕ್ಕಳ ಶೈಕ್ಷಣಿಕ ಬೆಳವಣಿಗೆ ದೃಷ್ಟಿಯಿಂದ 2016 ರಲ್ಲಿ ಮೌಲಾನಾ ಅಜಾದ್ ( Moulana Azad) ಮಾದರಿ ಆಂಗ್ಲ ಮಾದ್ಯಮ ಶಾಲೆಯನ್ನು ಆರಂಭ ಮಾಡಿದೆ. ಈ ಶಾಲೆಯಲ್ಲಿ 6 ರಿಂದ 10 ನೇ ತರಗತಿವರೆಗೆ ಒಟ್ಟು 300 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 

ಆದರೆ 300 ವಿದ್ಯಾರ್ಥಿಗಳಿಗೆ ಇಲ್ಲಿ ಇರುವುದು ಕೇವಲ ಮೂರೇ ಮೂರು ತರಗತಿಗಳು ಮಾತ್ರ. ಇದರಿಂದಾಗಿ ಒಂದು ತರಗತಿಯಲ್ಲಿ ಎರಡೆರಡು ತರಗತಿಗಳನ್ನು ನಡೆಸಲಾಗುತ್ತಿದ್ದು, ಇನ್ನುಳಿದ ಕೆಲ ತರಗತಿಗಳಲ್ಲಿ ವಿದ್ಯಾರ್ಥಿಗಳು ಹೊರಗಡೆ ಕುಳಿತು ಪಾಠ ಕೇಳಬಹುದಾದ ಅನಿವಾರ್ಯತೆ ಉಂಟಾಗಿದೆ. ಇನ್ನು ವಿದ್ಯಾರ್ಥಿಗಳು ತರಗತಿಯ ಹೊರಗಡೆ ಕುಳಿತು ಪಾಠ ಕೇಳುವುದರಿಂದ‌ ಅವರಿಗೆ ಶಿಕ್ಷಕರು ಹೇಳುವ ಪಾಠ ಸರಿಯಾಗಿ ಅರ್ಥ ಆಗದಂತಾಗುತ್ತದೆ. ಜೊತೆಗೆ ಪಕ್ಕದಲ್ಲೇ ಪದವಿ ಕಾಲೇಜು ಇರುವುದರಿಂದ ಆ ಕಾಲೇಜಿನ ಗದ್ದಲಕ್ಕೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾಡುವ ಪಾಠ ಸರಿಯಾಗಿ ಕೇಳಿಸುವುದೇ ಇಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಪಡಬಾರದ ಕಷ್ಟಪಡುತ್ತಿದ್ದಾರೆ.

ಇನ್ನು ಈ ಮೌಲಾನಾ ಅಜಾದ್ ಶಾಲೆಗೆ ಸ್ವತಃ ಕಟ್ಟಡವಿಲ್ಲ. ಹೀಗಾಗಿ ಸದ್ಯ ಸರಕಾರಿ ಉರ್ದು ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿ‌ನ ಕಟ್ಟಡಗಳಲ್ಲಿ ತರಗತಿಗಳು ನಡೆಯುತ್ತಿದ್ದು, ಕೊಠಡಿಗಳು ಚಿಕ್ಕದಾಗಿವೆ. ಜೊತೆಗೆ ಇಕ್ಕಟ್ಟಿನ ಜಾಗದಲ್ಲಿ ತರಗತಿ ಕೊಠಡಿ ಇರುವುದರಿಂದ ಕಷ್ಟಪಟ್ಟು ವಿದ್ಯಾರ್ಥಿಗಳು ತರಗತಿಗೆ ಹೋಗಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಿಗೆ ತಲೆದೊರಿದೆ. 

Related Video