ಕರಗ ಮಹೋತ್ಸವ: ನಿಖಿಲ್‌ಗೆ ಗರ್ಭಗುಡಿ ಪ್ರವೇಶ ನಿಷೇಧ, ನೆಟ್ಟಿಗರ ಆಕ್ರೋಶ

 ಹೊರವಲಯದ ಆನೇಕಲ್ ( Anekal) ತಾಲೂಕಿನ ಮಾಯಸಂದ್ರದಲ್ಲಿ ಇದೇ ತಿಂಗಳ 14 ರಂದು ಕರಗ ಮಹೋತ್ಸವ (Karaga Mahothsava)ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಆಗಮಿಸಿದ್ದರು. 

First Published Apr 27, 2022, 2:42 PM IST | Last Updated Apr 27, 2022, 2:49 PM IST

ಬೆಂಗಳೂರು (ಏ.27): ಹೊರವಲಯದ ಆನೇಕಲ್ ( Anekal) ತಾಲೂಕಿನ ಮಾಯಸಂದ್ರದಲ್ಲಿ ಇದೇ ತಿಂಗಳ 14 ರಂದು ಕರಗ ಮಹೋತ್ಸವ (Karaga Mahothsava)ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಆಗಮಿಸಿದ್ದರು. ಈ ವೇಳೆ, ನಿಖಿಲ್ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ದರ್ಶನಕ್ಕೆ ತೆರಳಿದ್ದಾಗ ಗರ್ಭಗುಡಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದು ಚರ್ಚೆಗೆ ಗ್ರಾಸವಾಗಿದೆ. 

KPSC recruitmebt Scam:ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳು ಕೋಟಿ ಕೋಟಿಗೆ ಸೇಲ್!

ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಗರ್ಭಗುಡಿ ಪ್ರವೇಶಕ್ಕೆ ನಿಖಿಲ್ ಕುಮಾರಸ್ವಾಮಿಗೆ ನಿರ್ಬಂಧಿಸುವ ವಿಡಿಯೋ ವೈರಲ್ (Video Viral) ಆಗಿದ್ದು, ನೆಟ್ಟಿಗರು ಆಕ್ರೋಶ ಸಹ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಕರಗದಲ್ಲಿ ಇಲ್ಲದ ಸಂಪ್ರದಾಯ ಇಲ್ಲಿ ಏನು ಎಂದು ನೆಟ್ಟಿಗರು (Netizens) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಧರ್ಮರಾಯಸ್ವಾಮಿ ದರ್ಶನಕ್ಕೆ ತೆರಳಿದ್ದ ವೇಳೆ ನಿಖಿಲ್ ಕುಮಾರ್ ಸ್ವಾಮಿಯವರು ಒಳಗೆ  ಹೋಗಬಹುದಾ ಎಂದು ಕಾರ್ಯಕರ್ತರನ್ನು ಪ್ರಶ್ನಿಸುತ್ತಾರೆ.  ಈ ವೇಳೆ ಇಲ್ಲ ಸರ್ ಅಲ್ಲಿಗೆ ಹೋಗುವ ಹಾಗಿಲ್ಲ ಎಂದು ತಿಳಿಸಿದ್ದಾರೆ. ಕೊನೆಗೆ ಗರ್ಭಗುಡಿ ಹೊರಭಾಗದಲ್ಲಿ ನಿಲ್ಲಿಸಿ ಮಂಗಳಾರತಿ ನೀಡಿದ್ದು,  ಗರ್ಭಗುಡಿ ಹೊಸ್ತಿಲಲ್ಲಿ ನಿಂತು ಮಂಗಳಾರತಿ ಪಡೆದು , ಕಾಣಿಕೆ ಹಾಕಿ ದೇವರಿಗೆ ನಮಸ್ಕರಿಸಿ ನಿಖಿಲ್ ಕುಮಾರಸ್ವಾಮಿ ಹೊರ ನಡೆದಿದ್ದಾರೆ. 

ಇನ್ನೂ ಇಲ್ಲಿನ ಸ್ಥಳೀಯರ ಮಾಹಿತಿ ಪ್ರಕಾರ ಕರಗ ಮಹೋತ್ಸವ ನಡೆಸುವ ವಹ್ನಿಕುಲಸ್ಥರು ಬಿಟ್ಟು ಬೇರೆ ಸಮುದಾಯಕ್ಕೆ ಧರ್ಮರಾಯಸ್ವಾಮಿ ದೇವಾಲಯ ಗರ್ಭಗುಡಿ ಪ್ರವೇಶಕ್ಕೆ ನಿರ್ಬಂಧವಿದ್ದು,  ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ ಎನ್ನುತ್ತಾರೆ. ಇನ್ನೂ ಈ  ಹಿಂದೆ ಸಹ ಮಾಜಿ ಸಚಿವ ರಾಮಲಿಂಗಾರೆಡ್ಡಿಯರಿಗೂ ಸಹ ಇದೆ ರೀತಿ ಧರ್ಮರಾಯಸ್ವಾಮಿ ದೇವಾಲಯ ಗರ್ಭಗುಡಿ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ಅಂದು ಸಹ ಸ್ಥಳೀಯ ಸಂಪ್ರದಾಯ ಗೌರವಿಸಿ ದೇವರ ದರ್ಶನ ಪಡೆದು ವಾಪಸ್ಸಾಗಿದ್ದರು ಎನ್ನಲಾಗಿದೆ. 

Video Top Stories