New Year party: ಹೊಸ ವರ್ಷಾಚರಣೆ ಮೇಲೆ ಉಗ್ರರ ಕಣ್ಣು: ಹದ್ದಿನ ಕಣ್ಣಿಟ್ಟ ಖಾಕಿ ಪಡೆ

ಹೊಸ ವರ್ಷಾಚರಣೆ ಮೇಲೆ ಉಗ್ರರ ಕರಿನೆರಳು ಚಾಚಿದ್ದು, ಬೆಂಗಳೂರಿನಲ್ಲಿ ಭಯೋತ್ಪಾದಕ ಕೃತ್ಯ ತಡೆಯಲು ಖಾಕಿ ಪಡೆ ಹದ್ದಿನ ಕಣ್ಣಿಟ್ಟಿದೆ.

Share this Video
  • FB
  • Linkdin
  • Whatsapp

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನ್ಯೂ ಇಯರ್ ಪಾರ್ಟಿಗಳ ಮೇಲೆ ಉಗ್ರರು ಕಣ್ಣಿಟ್ಟಿದ್ದು, ಕಟ್ಟೆಚ್ಚರ ವಹಿಸುವಂತೆ ಕಮಿಷನರ್‌ ಕಚೇರಿಯಿಂದ ಸೂಚನೆ ಹೊರಡಿಸಲಾಗಿದೆ. ಹೊಸ ವರ್ಷಕ್ಕೆ ಕೇಂದ್ರ ವಿಭಾಗದ ಭದ್ರತೆಯೇ ಪೊಲೀಸರಿಗೆ ಸವಾಲಾಗಿದ್ದು, 31 ಪಬ್‌ 26 ಲೇಡಿಸ್ ಬಾರ್‌ 13 ಕ್ಲಬ್‌ ಹಾಗೂ 71 ರೆಸ್ಟೋರೆಂಟ್‌ ಬೆಂಗಳೂರು ಕೇಂದ್ರ ವಿಭಾಗದಲ್ಲಿವೆ. ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್‌, ಬ್ರಿಗೇಡ್‌ ರಸ್ತೆಯಲ್ಲಿ ಶೇ. 30ರಷ್ಟು ಪಬ್‌ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಹಿನ್ನೆಲೆಯಲ್ಲಿ ಖಾಕಿ ಸರ್ಪಗಾವಲು ಆಗಲಿದ್ದು, ಒಟ್ಟು 1800 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

Related Video