ನವಮಾಧ್ಯಮಕ್ಕೆ ಗೇಟ್‌ಕೀಪರ್‌ ವ್ಯವಸ್ಥೆ ಅಗತ್ಯ: ಪತ್ರಕರ್ತರ ಸಮ್ಮೇಳನದಲ್ಲಿ ರವಿ ಹೆಗಡೆ ಸಲಹೆ

ಕೋವಿಡ್‌ ಬಳಿಕ ಟಿವಿಗಳಲ್ಲಿ ಸುದ್ದಿಗಳನ್ನು ನೋಡುವವರ ಸಂಖ್ಯೆ ಶೇ.15 ಕಡಿಮೆ ಆಗಿದೆ. ಇನ್ನು ಡಿಜಿಟಲ್‌ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳನ್ನು ಓದುವವರ ಸಂಖ್ಯೆ ಶೇ.5 ಹೆಚ್ಚಳವಾಗಿದೆ.

Share this Video
  • FB
  • Linkdin
  • Whatsapp

ವಿಜಯಪುರ (ಫೆ.05): ವಿಜಯಪುರದಲ್ಲಿ ನಡೆದ 37ನೇ ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತರ ಸಮ್ಮೇಳನದಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಚೀಫ್‌ ಮೆಂಟರ್‌ ರವಿ ಹೆಗಡೆ ನೇತೃತ್ವದಲ್ಲಿ ನಡೆದ ನವಮಾಧ್ಯಮ ಮತ್ತು ಪತ್ರಕರ್ತರ ಕುರಿತ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

ಕೋವಿಡ್‌ ಬಳಿಕ ಟಿವಿಗಳಲ್ಲಿ ಸುದ್ದಿಗಳನ್ನು ನೋಡುವವರ ಸಂಖ್ಯೆ ಶೇ.15 ಕಡಿಮೆ ಆಗಿದೆ. ಇನ್ನು ಡಿಜಿಟಲ್‌ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳನ್ನು ಓದುವವರ ಸಂಖ್ಯೆ ಶೇ.5 ಹೆಚ್ಚಳವಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ನ್ಯೂಸ್‌ ಅಗ್ರಿಗೇಟರ್‌ ಸಂಸ್ಥೆಗಳು (ಗೂಗಲ್‌ ನ್ಯೂಸ್‌, ಡೈಲಿ ಹಂಟ್‌) ಮೂಲ ಸುದ್ದಿ ಸಂಸ್ಥೆಗಳಿಗೆ ಹಣವನ್ನು ನೀಡಲು ಪ್ರಾರಂಭಿಸಲಿವೆ. ವಿಶ್ವಾಸಾರ್ಹತೆ ಸಮಸ್ಯೆ ನವಮಾಧ್ಯಮಗಳಲ್ಲಿ ಕಂಡುಬರುತ್ತಿದೆ. ಸುಳ್ಳು ಸುದ್ದಿಗಳನ್ನು ಹರಡಲಾಗುತ್ತದೆ. ಸುದ್ದಿಯ ಹೆಡ್‌ಲೈನ್‌ ಮತ್ತು ಫೋಟೋವನ್ನು ನೋಡಿ ಕ್ಲಿಕ್‌ ಮಾಡಲಾಗುತ್ತದೆ. ಕ್ಲಿಕ್ ಬೇಟ್‌ಗಾಗಿ ಇಂತಹ ಫೇಕ್‌ ಸುದ್ದಿಗಳನ್ನು ಹರಡಲಾಗುತ್ತಿದ್ದು ಅದನ್ನು ನಿಯಂತ್ರಿಸಬೇಕು ಎಂದು ಸಲಹೆ ನಿಡಿದರು.

Related Video