Asianet Suvarna News Asianet Suvarna News

ನಿಜ ನಾಗರಕ್ಕೆ ಪೂಜೆ ಮಾಡುವ  ಶಿರಸಿಯ ಕುಟುಂಬ, ವಿಡಿಯೋ

Aug 5, 2019, 7:56 PM IST

ನಾಗರ ಪಂಚಮಿ ಹಬ್ಬದ ದಿನ ಇಲ್ಲೊಂದು ಕುಟುಂಬ ನಿಜ ನಾಗರಕ್ಕೆ ಪೂಜೆ ಮಾಡಿಕೊಂಡು ಬರುತ್ತಿದೆ. ಇದೇನು ಹೊಸದಲ್ಲ...ಕುಟುಂಬದ ಪರಂಪರೆಯೇ ಆಗಿಹೋಗಿದೆ.  ಶಿರಸಿಯ ಖ್ಯಾತ ಉರಗ ಪ್ರೇಮಿ ಪ್ರಶಾಂತ ಹುಲೇಕಲ್ ತಮ್ಮ ಮನೆಯಲ್ಲಿ ಪ್ರತಿ ವರ್ಷದಂತೆ ನೈಜ ನಾಗರಕ್ಕೆ ಪೂಜೆ ಸಲ್ಲಿಸಿ ನಾಗರ ಪಂಚಮಿ ಆಚರಿಸಿದರು.

ಕುಟುಂಬಸ್ಥರೊಂದಿಗೆ ಎರಡು ನಾಗರ ಹಾವಿಗೆ ಹಾಲೆರೆದು, ಮಂಗಳಾರತಿ ಮಾಡಿ ಪೂಜೆ ಸಲ್ಲಿಸಿ ಭಕ್ತಿ ಮೆರೆದರು. ಹಾವು ಹಿಡಿದು ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡುವ ಕಾರ್ಯದಲ್ಲಿ ಮೊದಲಿನಿಂದಲೂ ತೊಡಗಿಕೊಂಡಿರುವ ಪ್ರಶಾಂತ ಹುಲೇಕಲ್ ನಗರದ ಹುಲೇಕಲ್ ರಸ್ತೆಯಲ್ಲಿನ ಯುವಾ ಮೋಟಾರ್ಸ್‌ ಕಾರೊಂದರಲ್ಲಿ ಹೊಕ್ಕಿದ್ದ ನಾಗರ ಹಾವನ್ನು ಸುರಕ್ಷಿತವಾಗಿ ಹಿಡಿದು ತಂದು ಪೂಜೆ ಸಲ್ಲಿಸಿ ಪುನಃ ಕಾಡಿಗೆ ಬಿಟ್ಟಿದ್ದಾರೆ.