ಒಂದು ಹುಲಿ ಹಿಡಿದಾಯ್ತು..ಮತ್ತೊಂದು ಬಂತು.. ಹುಲಿರಾಯನ ಕಂಡು ಬೆಚ್ಚಿದ ಯುವತಿ
ವ್ಯಾಘ್ರ ನೋಡಿ ಗಾಬರಿಯಾದ ಯುವತಿ ಸದ್ಯ ಸೇಫ್/ ಮಾತನಾಡುವ ಸ್ಥಿತಿಗೆ ಮರಳಿದ ಯುವತಿ/ ಮಡಿಕೇರಿ ಜಿಲ್ಲೆ ವಿರಾಜಪೇಟೆ ತಾಲೂಕು ಪೇರ್ಮಾಡು ಗ್ರಾಮ. ನೆಂಟರ ಮನೆಯಿಂದ ಗೋಣಿಕೊಪ್ಪ ಕಾಫಿಬೋರ್ಡ್ ಕಾಲೇಜಿಗೆ ಹೋಗುತ್ತಿದ್ದ ಯುವತಿ/ 17 ವರ್ಷದ ರಕ್ಷಾ ಹುಲಿ ನೋಡಿ ಗಾಬರಿಯಾದ ಯುವತಿ.
ಮೈಸೂರು/ ಮಡಿಕೇರಿ (ಫೆ. 23) ವ್ಯಾಘ್ರ ನೋಡಿ ಗಾಬರಿಯಾದ ಯುವತಿ ಸದ್ಯ ಸೇಫ್ ಆಗಿದ್ದಾರೆ ಮಾತನಾಡುವ ಸ್ಥಿತಿಗೆ ಯುವತಿ ಮರಳಿದ್ದಾರೆ. ಮಡಿಕೇರಿ ಜಿಲ್ಲೆ ವಿರಾಜಪೇಟೆ ತಾಲೂಕು ಪೇರ್ಮಾಡು ಗ್ರಾಮದ ನೆಂಟರ ಮನೆಯಿಂದ ಗೋಣಿಕೊಪ್ಪ ಕಾಫಿಬೋರ್ಡ್ ಕಾಲೇಜಿಗೆ ಹೋಗುತ್ತಿದ್ದ ಯುವತಿ ಹುಲಿ ಕಂಡು ಬೆಚ್ಚಿಬಿದ್ದಿದ್ದರು.
17 ವರ್ಷದ ರಕ್ಷಾ ಹುಲಿ ನೋಡಿ ಗಾಬರಿಗೊಂಡಿದ್ದರು. ಮನೆಯಿಂದ ಬೆಳಿಗ್ಗೆ 8.10ಕ್ಕೆ ಕಾಲೇಜಿಗೆ ಹೊರಟೆ. ಬಸ್ ನಿಲ್ದಾಣಕ್ಕೆ 15 ನಿಮಿಷಗಳು ನಡೆಯಬೇಕು. ಸ್ವಲ್ಪ ದೂರ ನಡೆದು ಬಂದಾಗ ತಕ್ಷಣ ಹುಲಿ ಕಂಡಿತು. ಎಡದಿಂದ ಬಲ ಭಾಗಕ್ಕೆ ಹುಲಿ ಹೋಯ್ತು. ಹುಲಿ ನೋಡಿದ ತಕ್ಷಣ ನನಗೆ ಗಾಬರಿ ಆಯ್ತು. ನನಗೆ ಗಾಬರಿಯಿಂದ ಮನೆಗೆ ಓಡಿ ಬಂದೆ. ಆ ಮೇಲೆ ಏನಾಯ್ತು ನನಗೆ ಗೊತ್ತಾಗಲಿಲ್ಲ ಎಂದು ಘಟನೆ ವಿವರಿಸಿದ್ದಾರೆ.
ನಮ್ಮ ಮನೆ ಇರುವುದು ಪೇರುಮಾಡಯ. ಅಲ್ಲಿಂದ ಕಾಲೇಜಿಗೆ ಕಾಲೇಜಿಗೆ 40 ಕಿಲೋಮೀಟರ್ ಆಗುತ್ತೆ. ಅದಕ್ಕಾಗಿ ಅವರ ಚಿಕ್ಕಪ್ಪನ ಮೆಯಲ್ಲಿ ಓದಿಸುತ್ತಿದ್ದೆವು.ನಿತ್ಯ ಕಾಲೇಜಿಗೆ ಹೋಗುವಂತೆ ಮಗಳು ಹೋಗಿದ್ದಾಳೆ. ಭಯ ಹುಟ್ಟಿಸಿದಿದ್ದ ಹುಲಿಯನ್ನು ಹಿಡಿದಿದ್ದಾರೆ ಅಂತ ಹೇಳಿದ್ರು. ಆಗ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದೆವು. ಆದರೆ ಮತ್ತೊಂದು ಹುಲಿ ಈಗ ಕಂಡಿದೆ.ತುಂಬಾ ಭಯದ ವಾತಾವರಣ ಇದೆ ಎಂದು ಯುವತಿ ತಾಯಿ ಹೇಳಿದ್ದಾರೆ.