ಮಂಗಳೂರು ಪಂಪ್‌ವೆಲ್‌ ಫ್ಲೈಓವರ್‌ಗೆ ಕೊನೆಗೂ ಸಿಕ್ತು ಉದ್ಘಾಟನೆ ಭಾಗ್ಯ

10 ವರ್ಷದ ನಂತರ ಮಂಗಳೂರಿನ ಪಂಪ್‌ವೆಲ್‌ ಫ್ಲೈ ಓವರ್‌ಗೆ ಕೊನೆಗೂ ಉದ್ಘಾಟನೆಯ ಭಾಗ್ಯ ದೊರೆತಿದೆ. ಸುಮಾರು 600 ಮೀ ಉದ್ದದ ಫ್ಲೈಓವರ್‌ ಕಾಮಗಾರಿ 2010ರಲ್ಲಿ ಆರಂಭವಾಗಿತ್ತು. ಐದಾರು ಬಾರಿ ಡೆಡ್‌ಲೈನ್ ಕೊಟ್ಟ ಮೇಲೆ ಇದೀಗ ಪಂಪ್‌ವೆಲ್‌ ಫ್ಲೈಓವರ್‌ಗೆ ಉದ್ಘಾಟನೆ ಭಾಗ್ಯ ಬಂದಿದೆ.

First Published Jan 31, 2020, 3:11 PM IST | Last Updated Jan 31, 2020, 3:15 PM IST

ಮಂಗಳೂರು(ಜ.31): 10 ವರ್ಷದ ನಂತರ ಮಂಗಳೂರಿನ ಪಂಪ್‌ವೆಲ್‌ ಫ್ಲೈ ಓವರ್‌ಗೆ ಕೊನೆಗೂ ಉದ್ಘಾಟನೆಯ ಭಾಗ್ಯ ದೊರೆತಿದೆ. ಸುಮಾರು 600 ಮೀ ಉದ್ದದ ಫ್ಲೈಓವರ್‌ ಕಾಮಗಾರಿ 2010ರಲ್ಲಿ ಆರಂಭವಾಗಿತ್ತು. ಐದಾರು ಬಾರಿ ಡೆಡ್‌ಲೈನ್ ಕೊಟ್ಟ ಮೇಲೆ ಇದೀಗ ಪಂಪ್‌ವೆಲ್‌ ಫ್ಲೈಓವರ್‌ಗೆ ಉದ್ಘಾಟನೆ ಭಾಗ್ಯ ಬಂದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಫ್ಲೈಓವರ್ ಉದ್ಘಾಟಿಸಿದ್ದಾರೆ. ಫ್ಲೈಓವರ್‌ನ ಉದ್ದಕ್ಕೂ ಮೆರವಣಿಗೆಯೂ ನಡೆದಿದೆ. ಶಾಸಕ ವೇದವ್ಯಾಸ ಕಾಮತ್ ಸೇರಿ ಹಲವು ರಾಜಕೀಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕಾಮಗಾರಿಗೆ ದೀರ್ಘ ಕಾಲ ಸಮಯ ಪಡೆದ ಕಾರಣ ಪಂಪ್‌ವೆಲ್ ಕಾಮಗಾರಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.