Chamarajanagar: ಮಹದೇಶ್ವರನ ಹುಂಡಿಗೆ 2.8 ಕೋಟಿ ರೂ, ಕೋಟ್ಯಾಧೀಶನಾದ ಮಲೆ ಮಾದಪ್ಪ!
ಮಹದೇಶ್ವರ ಬೆಟ್ಟದಲ್ಲಿರುವ ಮಲೆ ಮಹಾದೇಶ್ವರ ಸ್ವಾಮಿಯ ಹುಂಡಿಯಲ್ಲಿ ಕೇವಲ 28 ದಿನದಲ್ಲಿ .2.83 ಕೋಟಿ ಸಂಗ್ರಹವಾಗಿ ದಾಖಲೆ ನಿರ್ಮಿಸಿದೆ. .2,83,12,841 ನಗದು, 3.800 ಗ್ರಾಂ ಬೆಳ್ಳಿ, 73 ಗ್ರಾಂ ಚಿನ್ನ ಸಂಗ್ರಹವಾಗಿದೆ. ಈ ಹಿಂದೆ .2.50 ಕೋಟಿ ಸಂಗ್ರಹವಾಗಿದ್ದು, ಈವರೆಗಿನ ದಾಖಲೆ.
ಚಾಮರಾಜನಗರ (ಮಾ. 12): ಇಲ್ಲಿನ ಮಹದೇಶ್ವರ ಬೆಟ್ಟದಲ್ಲಿರುವ ಮಲೆ ಮಹಾದೇಶ್ವರ ಸ್ವಾಮಿಯ ಹುಂಡಿಯಲ್ಲಿ ಕೇವಲ 28 ದಿನದಲ್ಲಿ .2.83 ಕೋಟಿ ಸಂಗ್ರಹವಾಗಿ ದಾಖಲೆ ನಿರ್ಮಿಸಿದೆ. .2,83,12,841 ನಗದು, 3.800 ಗ್ರಾಂ ಬೆಳ್ಳಿ, 73 ಗ್ರಾಂ ಚಿನ್ನ ಸಂಗ್ರಹವಾಗಿದೆ. ಈ ಹಿಂದೆ .2.50 ಕೋಟಿ ಸಂಗ್ರಹವಾಗಿದ್ದು, ಈವರೆಗಿನ ದಾಖಲೆ. ಆದರೆ ಅತೀ ಕಡಿಮೆ ಅವಧಿಯಲ್ಲಿ ಇದೇ ಪ್ರಥಮ ಬಾರಿಗೆ ಇಷ್ಟುಹಣ ಸಂಗ್ರಹವಾಗಿದೆ. ಶಿವರಾತ್ರಿ ಪ್ರಯುಕ್ತ ಲಕ್ಷಾಂತರ ಜನರು ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದು, ದೇವರ ದರ್ಶನ ಪಡೆದಿದ್ದರು.