Asianet Suvarna News Asianet Suvarna News

ಸುವರ್ಣ ನ್ಯೂಸ್‌ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗ್ಯಾಂಗ್‌ನಿಂದ ಧಮ್ಕಿ!

ಮಲಪ್ರಭಾ ಎಡದಂಡೆ ಕಾಲುವೆ ನೀರಿಗೆ ಕೆಮಿಕಲ್ ನೀರು ಹರಿ ಬಿಡುತ್ತಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ ಸಕ್ಕರೆ ಕಾರ್ಖಾನೆ| ರಿಯಾಲಿಟಿ ಚೆಕ್ ಮಾಡಲು ಹೋದ ಸಂದರ್ಭದಲ್ಲಿ ಸುವರ್ಣ ನ್ಯೂಸ್ ತಂಡಕ್ಕೆ ಧಮ್ಕಿ ಹಾಕಿದ ಹೆಬ್ಬಾಳ್ಕರ್ ಗ್ಯಾಂಗ್| ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಪ್ರತಿದಿನ ಶಾಪ ಹಾಕುತ್ತಿರುವ ರೈತರು|

First Published Dec 28, 2019, 10:16 AM IST | Last Updated Dec 28, 2019, 6:02 PM IST

ಧಾರವಾಡ(ಡಿ.28): ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ ಸಕ್ಕರೆ ಕಾರ್ಖಾನೆ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಹೌದು, ಈ ಕಾರ್ಖಾನೆಯಿಂದ ಕೆಮಿಕಲ್‌ಯುಕ್ತ ನೀರನ್ನು ಮಲಪ್ರಭಾ ಎಡದಂಡೆ ಕಾಲುವೆ ನೀರಿಗೆ ಬಿಡಲಾಗುತ್ತಿದೆ. ಇದೆ ನೀರು ರೈತರ ಗದ್ದೆಗೆ ಹರಿಯುತ್ತೆ. ಈ ಬಗ್ಗೆ ರಿಯಾಲಿಟಿ ಚೆಕ್ ಮಾಡಲು ಹೋದ ಸುವರ್ಣ ನ್ಯೂಸ್‌ ತಂಡಕ್ಕೆ ಹೆಬ್ಬಾಳ್ಕರ್ ಗ್ಯಾಂಗ್ ಧಮ್ಕಿ ಹಾಕಿದೆ. 

ಸುವರ್ಣ ನ್ಯೂಸ್ ವರದಿಗಾರರನ್ನು ಕಂಡ ಕೂಡಲೇ ಹೆಬ್ಬಾಳ್ಕರ್ ಗ್ಯಾಂಗ್ ಕ್ಯಾಮರಾ ಬಂದ್ ಮಾಡಿ, ಮೊಬೈಲ್ ಆಫ್ ಮಾಡಿ ಅಂತ ಧಮ್ಕಿ ಹಾಕಿದೆ. ಇದನ್ನು ಪ್ರಶ್ನಿಸಲು ಹೋದ ಸುವರ್ಣ ನ್ಯೂಸ್ ತಂಡದ ಮೇಲೆ ಹೆಬ್ಬಾಳ್ಕರ್ ಗ್ಯಾಂಗ್ ಧಮ್ಕಿ ಹಾಕಿದೆ. ಇದರಿಂದ ಈ ಭಾಗದ ರೈತರು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಪ್ರತಿದಿನ ಶಾಪ ಹಾಕುತ್ತಿದ್ದಾರೆ. 
ಡಿಸೆಂಬರ್ 28ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories