Kolar: 5 ಎಕರೆ ಜಮೀನಲ್ಲಿ ಬೆಳೆದಿದ್ದ ಕಲ್ಲಂಗಡಿ ಹಣ್ಣು ನಾಶ ಮಾಡಿದ ದುಷ್ಕರ್ಮಿಗಳು: ಕಂಗಾಲಾದ ರೈತ

*  ಬೇರೆಯವರ ಜಮೀನು ಗುತ್ತಿಗೆ ಪಡೆದು ಬೆವರು ಸುರಿಸಿ ಸಂಪಾದನೆ ಮಾಡ್ತಿದ್ದ ಕೃಷಿಕ
*  ದೊಣ್ಣೆ, ಮಚ್ಚು ಬಳಸಿ ಮನಬಂದಂತೆ ಕಲ್ಲಂಗಡಿ ಹಣ್ಣುಗಳನ್ನು ಕತ್ತರಿಸಿ ಹಾಕಿ ವಿಕೃತಿ 
*  ಇನ್ನೇನು 15 ದಿನಗಳಲ್ಲಿ ಕಟಾವು ಮಾಡಿ ಮಾರಾಟ ಮಾಡಬೇಕಿದ್ದ ಕಲ್ಲಂಗಡಿ ಹಣ್ಣು ನಾಶ
 

First Published Feb 23, 2022, 8:51 AM IST | Last Updated Feb 23, 2022, 8:51 AM IST

ಕೋಲಾರ(ಫೆ.23):  ಕೋಲಾರ ತಾಲೂಕಿನ ಹೊರಟಿ ಅಗ್ರಹಾರ ಗ್ರಾಮದಲ್ಲಿ 5 ಎಕರೆ ಜಮೀನನ್ನು ಗುತ್ತಿಗೆಗೆ ಪಡೆದು ಸಾಲಸೋಲ ಮಾಡಿ ಕಲ್ಲಂಗಡಿ ಹಣ್ಣನ್ನು ಬೆಳೆದಿರುವ ರೈತ ಅಂಬರೀಷ್‌ನ ಬೆಳೆವಣಿಗೆಯನ್ನು ಸಹಿಸಲಾಗದೆ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ.  ಹೌದು,  ತಡರಾತ್ರಿ ಕಲ್ಲಂಗಡಿ ಹಣ್ಣಿನ ತೋಟಕ್ಕೆ ನುಗ್ಗಿರುವ ದುಷ್ಕರ್ಮಿಗಳು ದೊಣ್ಣೆ ಹಾಗೂ ಮಚ್ಚನ್ನು ಬಳಸಿ ಮನಬಂದಂತೆ ಕಲ್ಲಂಗಡಿ ಹಣ್ಣುಗಳನ್ನು ಕತ್ತರಿಸಿ ಹಾಕಿದ್ದಾರೆ. ಬೆಳಿಗ್ಗೆ ಎಂದಿನಂತೆ ತೋಟಕ್ಕೆ ಬಂದ ಅಂಬರೀಷ್‌ಗೆ ಕಣ್ಣಾರೆ ಕಂಡು ಒಂದು ಕ್ಷಣ ಶಾಕ್ ಆಗಿದೆ.

ಇನ್ನು 25 ರಿಂದ 30 ಸಾವಿರ ಮೌಲ್ಯದ ಕಲ್ಲಂಗಡಿ ಹಣ್ಣುಗಳನ್ನು ದುಷ್ಕರ್ಮಿಗಳು ನಾಶ ಮಾಡಿದ್ದಾರೆ. ಸಣ್ಣಪುಟ್ಟ ಕಾಯಿಗಳನ್ನು ಬಿಟ್ಟು, ಬೇಕು ಅಂತಾಲೇ 15 ದಿನಗಳಲ್ಲಿ ಕಟಾವು ಮಾಡಿ ಮಾರಾಟ ಮಾಡಬೇಕಿದ್ದ ಹಣ್ಣನ್ನು ನಾಶ ಮಾಡಿದ್ದು, ರೈತ ಅಂಬರೀಷ್ ಗೆ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎನ್ನುವಂತಾಗಿದೆ. ರಾತ್ರಿ 9 ಗಂಟವರೆಗೂ ಇಲ್ಲೇ ಕಾವಲು ಕಾದು ಮನೆಗೆ ಹೋಗಿದ್ದ ಅಂಬರೀಷ್ ಬೆಳಿಗ್ಗೆ ಬಂದು ನೋಡೋಷ್ಟರಲ್ಲಿ 700 ಕ್ಕೂ ಹೆಚ್ಚು ಕಲ್ಲಂಗಡಿ ಹಣ್ಣುಗಳು ನಾಶವಾಗಿರೋದನ್ನು ಕಂಡು ಅರಗಿಸಿಕೊಳ್ಳೋದಕ್ಕೆ ಆಗ್ತಿಲ್ಲ. ಈ ಬಗ್ಗೆ ಕೆಲವರ ಮೇಲೆ ಅನುಮಾನವಿದ್ದು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ನಿರ್ಧಾರ ಮಾಡಿದ್ದಾರೆ.

News Hour : ಹರ್ಷ ಹತ್ಯೆ ನಂತರ ಬೆಳಿಗೆ ಬರುತ್ತಿರುವ ಆಘಾತಕಾರಿ ಅಂಶಗಳು!

ಅದೇನೇ ದ್ವೇಷ ಇದ್ರು ಸಹ ಈ ರೀತಿ ಬೆಳೆದ ಬೆಳೆಯನ್ನು ನಾಶ ಮಾಡಿ ವಿಕೃತಿ ಮೆರೆದಿರೋದು ಖಂಡನೀಯ. ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆ ನೀಡಿ ರೈತನಿಗೆ ಆಗಿರುವ ನಷ್ಟ ಭರಿಸುವ ಕೆಲಸ ಸಂಬಂಧಪಟ್ಟ ಅಧಿಕಾರಿಗಳು ಮಾಡಲಿ ಅನ್ನೋದು ನಮ್ಮ ಆಶಯ.