Bengaluru: ಪುಂಡರ ಹಾವಳಿಗೆ ಬೆಚ್ಚಿಬಿದ್ದ ಗೋವಿಂದರಾಜ ನಗರ ಜನ

*ಮನೆ ಮುಂದೆ ನಿಲ್ಲಿಸಿದ್ದ ಕಾರುಗಳು ಜಖಂ!
*ಅಮಲಿನಲ್ಲಿ ಲಾಂಗ್‌ ಹಿಡಿದು ಪುಂಡರ ಅಟ್ಟಹಾಸ..!
*ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆ
 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 19): ನಗರದಲ್ಲಿ ಕಿಡಿಗೇಡಿಗಳು ಅಟ್ಟಹಾಸ ನಡೆಸಿದ್ದು, ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ರಾತ್ರಿ ಮಾರಕಾಸ್ತ್ರಗಳಿಂದ ಒಡೆದು ಜಖಂಗೊಳಿಸಿದ್ದಾರೆ. ಪುಂಡರ ಹಾವಳಿಗೆ ಗೋವಿಂದರಾಜ ನಗರದ (Govindraj Nagar) ಜನ ಬೆಚ್ಚಿ ಬಿದ್ದಿದ್ದಾರೆ. ಅಮಲಿನಲ್ಲಿದ್ದ ಪುಂಡರು ಲಾಂಗ್‌ ಹಿಡಿದು ಅಟ್ಟಹಾಸ ಮೆರೆದಿದ್ದಾರೆ. ಒಂದೇ ರಾತ್ರಿಯಲ್ಲಿ30ಕ್ಕೂ ಹೆಚ್ಚು ಆಟೋ ಹಾಗೂ ಕಾರಿನ ಗ್ಸಾಸ್‌ಗಳನ್ನು ಪುಂಡರು ಪುಡಿ ಮಾಡಿದ್ದಾರೆ. ದ್ವಿಚಕ್ರ ವಾಹನದಲ್ಲಿ ಬಂದಿದ್ದ ಮೂವರು ಪುಂಡರು ರಸ್ತೆ ಪಕ್ಕ ನಿಲ್ಲಿಸದ್ದ ವಾಹನಗಳನ್ನು ಹಾನಿಗೊಳಿಸಿದ್ದಾರೆ. 

ಇದನ್ನೂ ಓದಿ:Bengaluru Crime: ವಿಮಾನದಲ್ಲಿ ಬೆಂಗ್ಳೂರಿಗೆ ಬಂದು ಕಳ್ಳತನ: ನಾಲ್ವರ ಬಂಧನ

ಕಾಮಾಕ್ಷಿಪಾಳ್ಯ ಪೋಲಿಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವಾಹನಗಳ ಗಾಜು ಪುಡಿ ಮಾಡಿದ ಯುವಕರಿಗಾಗಿ ಪೋಲಿಸರು ಬಲೆ ಬೀಸಿದ್ದಾರೆ. ಬೆಂಗಳೂರಿನಲ್ಲಿ ಪದೇ ಪದೇ ಇಂಥಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಹಿಂದೆ ಕೂಡ ಮಹಾಲಕ್ಷ್ಮಿಲೇಔಟ್‌, ಕೆಂಗೇರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ದುಷ್ಕರ್ಮಿಗಳು ವಾಹನಗಳ ಗಾಜು ಪುಡಿ ಮಾಡಿದ ಘಟನೆಗಳು ಬೆಳಕಿಗೆ ಬಂದಿವೆ. 

Related Video