ಸರ್ಕಾರದ ನಡೆ ಹಳ್ಳಿ ಕಡೆ: ಉತ್ತರ ಕನ್ನಡದಲ್ಲಿ ಆರ್.ಅಶೋಕ್‌ ಗ್ರಾಮ ವಾಸ್ತವ್ಯ

*   ಅಚಿವೆ ಗ್ರಾಮದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ
*   ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಇತರೆ ದಾಖಲೆ ವಿತರಣೆ
*   ವಿದ್ಯಾರ್ಥಿನಿಯರಿಗೆ ಲ್ಯಾಪ್‌ಟಾಪ್‌ ವಿತರಣೆ ಮಾಡಲಾಯಿತು 
 

Share this Video
  • FB
  • Linkdin
  • Whatsapp

ಉತ್ತರಕನ್ನಡ(ಏ.16): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಸರ್ಕಾರದ ನಡೆ ಹಳ್ಳಿ ಕಡೆ' ಯೋಜನೆಯನ್ನ ಕಂದಾಯ ಸಚಿವ ಆರ್. ಅಶೋಕ್‌ ಮುಂದುವರೆಸಿದ್ದಾರೆ. ಗ್ರಾಮ ವಾಸ್ತವ್ಯದ ಮೂಲಕ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹಾಗೂ ಅಂಕೋಲಾದ ಅಚಿವೆ ಗ್ರಾಮದಲ್ಲಿ ವಿವಿಧ ಯೋಜನೆಗಳಿಗೆ ಸಚಿವ ಆರ್‌.ಅಶೋಕ್‌ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಇತರೆ ದಾಖಲೆಗಳನ್ನ ವಿತರಿಸಿದ್ದಾರೆ. ಸಚಿವರಿಗೆ ಸಿದ್ದಿ ಮಹಿಳೆಯರು ತಮ್ಮದೇ ಶೈಲಿಯ ನೃತ್ಯದ ಮೂಲಕ ಸ್ವಾಗತಿಸಿದ್ದಾರೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಲ್ಯಾಪ್‌ಟಾಪ್‌ ವಿತರಣೆ ಮಾಡಲಾಯಿತು. 

ಹೊಸಪೇಟೆಯಲ್ಲಿ ಬಿಜೆಪಿ ಕಾರ್ಯಕಾರಿಣಿ: ಸಂಪುಟ, ಚುನಾವಣೆ ಬಗ್ಗೆ ಹೈವೋಲ್ಟೇಜ್ ಚರ್ಚೆ

Related Video