
ಬೆಳಗಾವಿ: ಸೀಜ್ ಮಾಡಿದ ಮನೆ ಬಿಡಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್! Lakshmi Hebbalkar
ಬೆಳಗಾವಿ: ಕಳೆದ ಏಂಟು ತಿಂಗಳ ಹಿಂದೆ ಸೀಜ್ ಮಾಡಿದ್ದ ಮನೆಯನ್ನು ಬಿಡಿಸಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬವೊಂದಕ್ಕೆ ನೆರವಾಗಿದ್ದಾರೆ. ಬೆಳಗಾವಿ ತಾಲೂಕಿನ ವಾಗ್ವಾಡೆ ಗ್ರಾಮದ ಸುರೇಶ ಕಾಂಬಳೆ ಎಂಬುವವರು ಫೈನಾನ್ಸ್ ವೊಂದರಲ್ಲಿ 2020ರಲ್ಲಿ 7 ಲಕ್ಷ ಸಾಲ ಪಡೆದಿದ್ದರು. ಆರ್ಥಿಕ ಸಮಸ್ಯೆಯಿಂದ 2.50ಲಕ್ಷ ಬಾಕಿ ಮರುಪಾವತಿ ಮಾಡದ ಹಿನ್ನೆಲೆ ಫೈನಾನ್ಸ್ ಸಿಬ್ಬಂದಿ ಮನೆ ಸೀಜ್ ಮಾಡಿದ್ದರು. ಕಳೆದ 8 ತಿಂಗಳ ಹಿಂದೆಯೇ ಕೋರ್ಟ್ ಆದೇಶದಂತೆ ಫೈನಾನ್ಸ್‌ನವರು ಮನೆ ಸೀಜ್ ಮಾಡಿ ಮನೆಯನ್ನ ಹರಾಜಿಗಿಟ್ಟಿದ್ದರು. ಕಳೆದ ಎರಡು ದಿನಗಳ ಹಿಂದೆ ಮನೆ ಬಿಡಿಸಿಕೊಡುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ಗೆ ಸುರೇಶ್ ಮನವಿ ಮಾಡಿದ್ದರು. ಸಚಿವರ ಸೂಚನೆಯಂತೆ ಆಪ್ತಸಹಾಯಕ ಮಹಾಂತೇಶ ಹಿರೇಮಠ ನೇತೃತ್ವದಲ್ಲಿ ಫೈನಾನ್ಸ್ ಮನವೊಲಿಸಿ ಮನೆ ಓಪನ್ ಮಾಡಲಾಗಿದೆ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared