40 ಲಕ್ಷ ಸಾಲ ಬಾಕಿ ಉಳಿಸಿಕೊಂಡ ಮಂಗಳೂರು ವಿವಿ

Share this Video
  • FB
  • Linkdin
  • Whatsapp

ಭಾರೀ ಆರ್ಥಿಕ ಸಂಕಷ್ಟದಿಂದ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯ ಜಪ್ತಿ ಸುಳಿಯಲ್ಲಿದೆ. ಹಣಕಾಸು ಸಂಕಷ್ಟದಿಂದ ಜಪ್ತಿಯಾಗುತ್ತಾ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ಚರಾಸ್ತಿ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಗ್ರಾಮ ಪಂಚಾಯತ್‌ಗೆ ಲಕ್ಷ ಲಕ್ಷ ತೆರಿಗೆ ಬಾಕಿಯಿಟ್ಟ ಪ್ರತಿಷ್ಠಿತ ಯೂನಿವರ್ಸಿಟಿಗೆ ಸಂಕಷ್ಟ ಎದುರಾಗಿದೆ. ಹೌದು, ಇದು ರಾಜ್ಯದ ಪ್ರತಿಷ್ಠಿತ ಮಂಗಳೂರು ವಿಶ್ವ ವಿದ್ಯಾನಿಲಯದ ಆರ್ಥಿಕ ಸಂಕಷ್ಟದ ಸ್ಟೋರಿ! ಕೊಣಾಜೆ ಗ್ರಾ.ಪಂ ಮಂಗಳೂರು ವಿವಿಗೆ ಚರಾಸ್ತಿ ಜಫ್ತಿ ವಾರೆಂಟಿನ ಎಚ್ಚರಿಕೆ ನೋಟೀಸ್‌ ಕೊಟ್ಟಿದೆ. ದ.ಕ ಜಿಲ್ಲೆಯ ಉಳ್ಳಾಲ ತಾಲೂಕಿನ ಕೊಣಾಜೆ ಗ್ರಾ.ಪಂ ವ್ಯಾಪ್ತಿಯಲ್ಲಿರೋ ಮಂಗಳೂರು ವಿಶ್ವವಿದ್ಯಾನಿಲಯ, ಕಳೆದ 3 ವರ್ಷಗಳಲ್ಲಿ ಬರೋಬ್ಬರಿ 40 ಲಕ್ಷ ತೆರಿಗೆ ಬಾಕಿ ಉಳಿಸಿಕೊಂಡಿದೆ. ಶಿಕ್ಷಣ ಚಟುವಟಿಕೆ ಹೊರತುಪಡಿಸಿ ವಾರ್ಷಿಕ ಕೋಟ್ಯಾಂತರ ರೂ. ಆದಾಯವಿದ್ದರೂ, 2022ರಿಂದ 2024ರವರೆಗೆ ಗ್ರಾ.ಪಂಗೆ ಬರೋಬ್ಬರಿ 40,49,766 ಲಕ್ಷ ರೂ. ತೆರಿಗೆ ಬಾಕಿಯಿದೆ. ಕೊಣಾಜೆ ಗ್ರಾಮದಲ್ಲಿ ಬರೋಬ್ಬರಿ 400 ಎಕರೆಯಷ್ಟು ಭೂಭಾಗ ಹೊಂದಿರೋ ಮಂಗಳೂರು ವಿವಿ, ಕಾಲೇಜು ಕಟ್ಟಡಗಳ ಜೊತೆಗೆ ಕಮರ್ಷಿಯಲ್‌ ಕಾಂಪ್ಲೆಕ್ಸ್‌, ವಸತಿ ಗೃಹಗಳನ್ನು ಹೊಂದಿದೆ. ಕಮರ್ಷಿಯಲ್‌ ಕಟ್ಟಡಗಳ ಬಾಡಿಗೆ ಹಾಗೂ ಸಿಬ್ಬಂದಿ ವಸತಿ ಗೃಹಗಳ ಬಾಡಿಗೆಯಿಂದಗಳೂ ವಿವಿಗೆ ಆದಾಯ ಬರುತ್ತಿದ್ದು, ಬರೋಬ್ಬರಿ 98 ಲಕ್ಷದವರೆಗೆ ವಿವಿಗೆ ವಾರ್ಷಿಕ ಆದಾಯ ಬರುತ್ತಿದೆ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video