ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಕೇಸ್‌: ಸಂತ್ರಸ್ಥನ ಬಾಳಿಗೆ ಹೊಸ ಚೈತನ್ಯ ನೀಡಿದ ಯುಗಾದಿ

ಬೀಳುವ ಸ್ಥಿತಿಯಲ್ಲಿದ್ದ ಮನೆಯನ್ನು‌ ದುರಸ್ತಿಗೊಳಿಸಬೇಕು, ಮೇ ತಿಂಗಳಲ್ಲಿ ಮಗಳ ಮದುವೆಗೆ ದಿನ ನಿಶ್ಚಯವಾಗಿದೆ ಎಂದು ಪುರುಷೋತ್ತಮ್‌ ಪೂಜಾರಿ‌ ಹೇಳಿದ್ರು. ಈ ಮಧ್ಯೆ ಪುರುಷೋತ್ತಮ್ ಅಟೋದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ದುರ್ಘಟನೆ ಸಂಭವಿಸಿತ್ತು.

First Published Mar 22, 2023, 7:24 PM IST | Last Updated Mar 22, 2023, 7:24 PM IST

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತ್ರಸ್ಥ ಆಟೋ ಚಾಲಕ ಪುರುಷೋತ್ತಮ್‌ ಪೂಜಾರಿ‌ ಕುಟುಂಬಕ್ಕೆ ನವೀಕೃತ ಮನೆ ಹಸ್ತಾಂತರ ಮಾಡಲಾಗಿದೆ. ಯುಗಾದಿ ಹಬ್ಬದ ದಿನ ಗುರು ಬೆಳದಿಂಗಳು ಫೌಂಡೇಶನ್ ಈ ಮನೆಯನ್ನು ಹಸ್ತಾಂತರಿಸಿದೆ. ಬೀಳುವ ಸ್ಥಿತಿಯಲ್ಲಿದ್ದ ಮನೆಯನ್ನು‌ ದುರಸ್ತಿಗೊಳಿಸಬೇಕು, ಮೇ ತಿಂಗಳಲ್ಲಿ ಮಗಳ ಮದುವೆಗೆ ದಿನ ನಿಶ್ಚಯವಾಗಿದೆ ಎಂದು ಪುರುಷೋತ್ತಮ್‌ ಪೂಜಾರಿ‌ ಹೇಳಿದ್ರು. ಈ ಮಧ್ಯೆ ಪುರುಷೋತ್ತಮ್ ಅಟೋದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ದುರ್ಘಟನೆ ಸಂಭವಿಸಿತ್ತು. ಉಗ್ರ ಶಾರೀಕ್ ಕೃತ್ಯಕ್ಕೆ ಅಮಾಯಕ‌ ಅಟೋ ಚಾಲಕ ಪುರುಷೋತ್ತಮ್‌ ಪೂಜಾರಿ ಆಸ್ಪತ್ರೆ ಸೇರಿದ್ರು. ಚಿಕಿತ್ಸೆಯ ಸಂದರ್ಭದಲ್ಲಿಯೇ ಮನೆ ದುರಸ್ತಿ ಬಗ್ಗೆ ನೋವು ತೋಡಿಕೊಂಡಿದ್ರು. ಈ ಹಿನ್ನೆಲೆ ಪುರುಷೋತ್ತಮ್ ಆಸ್ಪತ್ರೆಯಲ್ಲಿದ್ದಾಗಲೇ ಗುರು ಬೆಳದಿಂಗಳು ಫೌಂಡೇಶನ್‌ ಮನೆ ನವೀಕರಿಸುವ ಭರವಸೆ ನೀಡಿತ್ತು ಎಂದು ತಿಳಿದುಬಂದಿದೆ. 
 

Video Top Stories