Asianet Suvarna News Asianet Suvarna News

ಮಂಡ್ಯದಲ್ಲಿ 8 ಪಾಸಿಟಿವ್ ಕೇಸ್ ಪತ್ತೆ; ಡಿಸಿ ಸ್ಪಷ್ಟನೆಯಿದು!

May 1, 2020, 5:04 PM IST

ಬೆಂಗಳೂರು (ಮೇ. 01): ಮಂಡ್ಯದಲ್ಲಿ ಇಂದು 8 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿದೆ. ನಿನ್ನೆ ವೃದ್ಧರೋರ್ವರು ಮೃತಪಟ್ಟಿದ್ದು ಅವರನ್ನು ಮಹಾರಾಷ್ಟ್ರದಿಂದ ಮಂಡ್ಯಕ್ಕೆ ಕರೆ ತರಲಾಗಿತ್ತು. ಮೃತರ ಪುತ್ರ ಮಹಾರಾಷ್ಟ್ರದ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಾರೆ. ಕಚೇರಿಯಿಂದ ಕಚೇರಿಗೆ ಓಡಾಡುವಾಗ ಕೊರೊನಾ ಬಂದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಮಹಾರಾಷ್ಟ್ರ ನಂಟು: ಮಂಡ್ಯದಲ್ಲಿ 8 ಪಾಸಿಟೀವ್ ಕೇಸ್ ಪತ್ತೆ

ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅಲ್ಲಿನ ವೈದ್ಯರು ರಿಪೋರ್ಟ್ ನೀಡಿದ್ದಾರೆ. ಆಂಬುಲೆನ್ಸನ್ನು ಚೆಕ್ ಮಾಡಿ ಬಿಡಲಾಗಿದೆ. ಅದರೂ ಕೊರೋನಾ ಸೋಂಕು ಹೇಗೆ ಬಂತು ಎಂದು ಗೊತ್ತಾಗುತ್ತಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕೆಂದು ಮಂಡ್ಯ ಡಿಸಿ ಡಾ. ವೆಂಕಟೇಶ್ ಹೇಳಿದ್ದಾರೆ.