ಬೆಂಗಳೂರಿನಲ್ಲಿ ಮತ್ತೊಂದು ಅಮಾನವೀಯ ಕೃತ್ಯ: ನಾಯಿ ಮೇಲೆ ಜೀಪ್ ಹತ್ತಿಸಿದ ವ್ಯಕ್ತಿ!
ರಸ್ತೆ ಮೇಲೆ ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿ ಕ್ರೌರ್ಯ ಮೆರೆದಿರುವ ಧಾರುಣ ಘಟನೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ನಡೆದಿದೆ. ನಗರದ ಜೆ.ಪಿ.ನಗರದ 8ನೇ ಹಂತ ಶೇಖರ್ ನಗರದಲ್ಲಿ ಡಿಸೆಂಬರ್ 31ರಂದು ಈ ಘಟನೆ ನಡೆದಿದ್ದು, ತಡವಾಗಿ ಈ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು (ಜ.09): ರಸ್ತೆ ಮೇಲೆ ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿ ಕ್ರೌರ್ಯ ಮೆರೆದಿರುವ ಧಾರುಣ ಘಟನೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ನಡೆದಿದೆ. ನಗರದ ಜೆ.ಪಿ.ನಗರದ 8ನೇ ಹಂತ ಶೇಖರ್ ನಗರದಲ್ಲಿ ಡಿಸೆಂಬರ್ 31ರಂದು ಈ ಘಟನೆ ನಡೆದಿದ್ದು, ತಡವಾಗಿ ಈ ಘಟನೆ ಬೆಳಕಿಗೆ ಬಂದಿದೆ. ಬಿಸಿಲಿನಲ್ಲಿ ಬೀದಿನಾಯಿಗಳ ಗುಂಪು ರಸ್ತೆ ಮೇಲೆ ಮಲಗಿತ್ತು. ಈ ವೇಳೆ ಅದೇ ರಸ್ತೆಯಲ್ಲಿ KA 02 MS 2781 ನಂಬರ್‌ನ ರೆಡ್ ಥಾರ್ ಕಾರು ಬಂದಿತ್ತು. ವಿಡಿಯೋ ನೋಡಿದ್ರೆ ಉದ್ದೇಶ ಪೂರ್ವಕ ಅನ್ನೋದು ಸ್ಪಷ್ಟ ಎಂದು ಪ್ರಾಣಿ ಪ್ರಿಯರು ಆರೋಪಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.