
ಕಾಮಗಾರಿ ನಡೆಸಿ ಎರಡು ದಿನಕ್ಕೆ ಕುಸಿದ ರಸ್ತೆ: ಬಿಬಿಎಂಪಿ ವಿರುದ್ಧ ಸ್ಥಳೀಯರ ಆಕ್ರೋಶ
ಬೆಂಗಳೂರಿನಲ್ಲಿ ರಸ್ತೆಗಿಳಿಯುವ ಮುನ್ನ ಎಚ್ಚರ ವಹಿಸುವುದು ಅಗತ್ಯವಾಗಿದೆ. ಯಾಕೆಂದರೆ ಹೆಜ್ಜೆ ಹೆಜ್ಜೆಗೂ ಗುಂಡಿಗಳು ಬಾಯ್ತೆರೆದು ನಿಂತಿವೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಕುಸಿದ ರಸ್ತೆಯು ಬಲಿ ಪಡೆಯಲು ಬಾಯ್ತೆರೆದು ನಿಂತಿದ್ದು, ಗುಂಡಿಗಳು ಬಿದ್ದ ರಸ್ತೆಯಲ್ಲಿ ಸುರಕ್ಷತಾ ಕ್ರಮವೇ ಇಲ್ಲ. ಮಹಾಲಕ್ಷ್ಮಿ ಲೇಔಟ್‌ನ ಸಪ್ತಗಿರಿ ಕಲ್ಯಾಣ ಮಂಟಪದ ಬಳಿ ರಸ್ತೆ ಕುಸಿತ ಆಗಿದ್ದು, BBMP ಕಾಮಗಾರಿ ಕಳಪೆ ಆಗಿದೆ. ಈ ರಸ್ತೆ ಕಾಮಗಾರಿ ನಡೆಸಿ ಕೇವಲ ಎರಡು ದಿನಗಳು ಆಗಿದೆ ಅಷ್ಟೆ. BBMP ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದು, ಹಿಡಿಶಾಪ ಹಾಕುತ್ತಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ