ಕ್ವಾರೆಂಟೈನ್ ಸೆಂಟರ್‌ನ ಉಪಹಾರದಲ್ಲಿ ಹಲ್ಲಿ ಪತ್ತೆ..!

ಜಿಲ್ಲೆಯ ಕೋರವಾರ ಗ್ರಾಮದ ನವೋದಯ ವಿದ್ಯಾಲಯದಲ್ಲಿ ಮುಂಬೈನಿಂದ ಬಂದಂತಹ 450 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಆದರೆ ಇಲ್ಲಿನ ಅಡುಗೆ ಕಂಡು ಕ್ವಾರಂಟೈನ್‌ನಲ್ಲಿರಿವವರು ಕಂಗಾಲಾಗಿದ್ದಾರೆ.

Share this Video
  • FB
  • Linkdin
  • Whatsapp

ಕಲಬುರಗಿ(ಮೇ.20): ರಾಜ್ಯದಲ್ಲಿ ಎರಡನೇ ಅತಿಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವ ಜಿಲ್ಲೆ ಎನಿಸಿಕೊಂಡಿರುವ ಕಲಬುರಗಿಯಲ್ಲಿ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ಕ್ವಾರಂಟೈನ್‌ನಲ್ಲಿದ್ದ ಜನ ಬೆಚ್ಚಿಬಿದ್ದಿದ್ದಾರೆ.

ಜಿಲ್ಲೆಯ ಕೋರವಾರ ಗ್ರಾಮದ ನವೋದಯ ವಿದ್ಯಾಲಯದಲ್ಲಿ ಮುಂಬೈನಿಂದ ಬಂದಂತಹ 450 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಆದರೆ ಇಲ್ಲಿನ ಅಡುಗೆ ಕಂಡು ಕ್ವಾರಂಟೈನ್‌ನಲ್ಲಿರಿವವರು ಕಂಗಾಲಾಗಿದ್ದಾರೆ.

ಕೊರೋನಾ ಶಂಕಿತ ಕಳ್ಳನನ್ನು ಹಿಡಿದ ಪೊಲೀಸರಿಗೆ ಕ್ವಾರಂಟೈನ್ ಶಿಕ್ಷೆ..!

ಆಹಾರದಲ್ಲಿ ಹಲ್ಲಿ ಪತ್ತೆಯಾದ ಬಳಿಕ ಕ್ವಾರಂಟೈನ್‌ನಲ್ಲಿದ್ದ ಜನ ಊಟ-ಉಪಹಾರ ತ್ಯಜಿಸಿ ಅಡುಗೆ ಮಾಡುವವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಈ ಆಹಾರದಲ್ಲಿ ಹಲ್ಲಿ ಬಿದ್ದಿರುವ ವಿಡಿಯೋವನ್ನು ವೈರಲ್ ಮಾಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Related Video