ಸಿಲಿಕಾನ್ ಸಿಟಿಯಲ್ಲಿ ಅಚ್ಚರಿ: ಬೂರ್ಗದ ಮರದಲ್ಲಿ ಸೋರುತ್ತಿದೆ ರಕ್ತದಂಥ ದ್ರವ

ಬೆಂಗಳೂರಿನಲ್ಲಿ ಮರದಲ್ಲಿ ರಕ್ತ ಸೋರುತ್ತಿದ್ದು, ಇದು ಮರಕ್ಕೆ ರೋಗನಾ ಅಥವಾ ವಿಸ್ಮಯವೋ ಎಂಬ ಕುತೂಹಲ ಮೂಡಿಸಿದೆ.
 

Share this Video
  • FB
  • Linkdin
  • Whatsapp

ಸಿಲಿಕಾನ್ ಸಿಟಿಯಲ್ಲಿ ಅಚ್ಚರಿ ನಡೆದಿದ್ದು, ಬೂರ್ಗದ ಮರವೊಂದರಲ್ಲಿ ರಕ್ತದಂಥ ದ್ರವ ಸೋರಿಕೆ ಆಗುತ್ತಿದೆ. ಇದನ್ನು ಕಂಡು ಪವಾಡವೆಂದು ಜನರು ಕೈ ಮುಗಿಯುತ್ತಿದ್ದಾರೆ. ರಾತ್ರಿಯಿಂದ ಸ್ಥಳೀಯರು ಮರಕ್ಕೆ ಪೂಜೆ ಮಾಡ್ತಿದ್ದಾರೆ. ಹಾಗೂ ಆರತಿ ಬೆಳಗಿ ಹೂ ಹಣ್ಣು ಇಡುತ್ತಿದ್ದಾರೆ. ಮರದ ಮಧ್ಯ ಭಾಗದಲ್ಲಿ ರಕ್ತದಂಥ ದ್ರವ ಸೋರುತ್ತಿದೆ. ಈ ಮರ ಚಳಿಗಾಲದಲ್ಲಿ ಎಲೆ ಬಿಡುತ್ತದೆ. ಈ ಬಗ್ಗೆ ಸ್ಥಳೀಯ ಪರಿಸರ ವಿಜ್ಞಾನಿಗಳು ಗಮನಿಸಿದ್ದು, ಈ ಮರದ ವಿಶೇಷತೆಯ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಇನ್ನು ಅರಣ್ಯ ಅಧಿಕಾರಿಗಳು ಪರಿಶೀಲಿಸಿ ಇಂತಹ ಮರಗಳು ಕಾಡಿನಲ್ಲಿ ಸಾಮಾನ್ಯವಾಗಿದ್ದು, ಮರದ ಮೇಲ್ಪದರವನ್ನು ಕಿತ್ತಾಗ ಈ ರೀತಿಯ ದ್ರವ ಸ್ರವಿಸುತ್ತವೆ ಎಂದು ಹೇಳಿದ್ದಾರೆ.

Related Video