ಮಾವನ ಸಾವಿನ ಸುದ್ದಿಯೂ ಗೊತ್ತಾಗ್ಲಿಲ್ಲ..ಯಾದಗಿರಿ ಕಂಡಕ್ಟರ್ ಕಣ್ಣೀರ ಕತೆ
ಇತ್ತೀಚೆಗೆ ಕೊಪ್ಪಳದ ಕೆಎಸ್ ಆರ್ ಟಿಸಿ ಸಿಬ್ಬಂದಿಗೆ ಮಗಳು ತೀರಿಹೋದ ವಿಚಾರವನ್ನ ಡಿಪೋ ಸಿಬ್ಬಂದಿ ತಿಳಿಸದೇ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದು ಸುದ್ದಿಯಾಗಿತ್ತು. ಈಗ ಅದೇ ರೀತಿಯ ಸುದ್ದಿಯೊಂದು ಯಾದಗಿರಿಯಲ್ಲಿ ವರದಿಯಾಗಿದೆ.. ತನ್ನ ನೋವಿನ ಕಥೆಯನ್ನ ಕಂಡಕ್ಟರ್ ವಿಡಿಯೋ ಮಾಡಿ ಹರಿಬಿಟ್ಟಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತಮ್ಮ ಮಾವನ ಸಾವಿನ ಸುದ್ದಿಯನ್ನು ಕೇಳಲಾಗದೆ, ಕೊನೆ ಘಳಿಗೆಯಲ್ಲಿ ಮಾವನ ಮುಖ ದರ್ಶನ ಮಾಡಲಾಗದ ಚಾಲಕರು ಅಧಿಕಾರಿಗಳ ವಿರುದ್ಧ ನೋವನ್ನು ಹೊರಹಾಕಿದ್ದಾರೆ. KSRTC ಚಾಲಕರು ಮತ್ತು ನಿರ್ವಾಹಕರು ಮೊಬೈಲ್ ಬಳಸಬಾರದು ಎಂದು ಆದೇಶ ನೀಡಿದ್ದಕ್ಕೆ ತಮಗಾದ ನೋವಿನ ಕತೆ ಹೇಳಿಕೊಂಡಿದ್ದಾರೆ.
ಗುರುಮಠಕಲ್ ಕಲಬುರಗಿ ಮಾರ್ಗದ ಸಾರಿಗೆ ಬಸ್ ನಲ್ಲಿ ನಿರ್ವಾಹಕರಾಗಿ ಕೆಲಸ ಮಾಡುವ ಪರಶುರಾಮ್ ಇದೇ ತಿಂಗಳ 16 ರಂದು ಎಂದಿನಂತೆ ಕೆಲಸಕ್ಕೆ ತೆರಳಿದ್ರು.. ಅದೇ ದಿನ ಪರಶುರಾಮ್ ಮಾವ ಮೃತ ಪಟ್ಟಿದ್ರು..ಪರಶುರಾಮ್ ಅವರನ್ನು ಸಂಪರ್ಕಿಸಲು ಕುಟುಂಬ ವರ್ಗ ಪ್ರಯತ್ನಿಸಿದೆ.. ಆದ್ರೆ, ಮೊಬೈಲ್ ಸಿಚ್ ಆಫ್ ಆಗಿದ್ರಿಂದ ಅವ್ರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ.. ಆದ್ರೆ, ಅದೇ ಮಾರ್ಗವಾಗಿ ಮರುದಿನ ಬರೋವಾಗಿ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಚಿಗರಳ್ಳಿ ಕ್ರಾಸ್ ಬಳಿ ದಹನ ಕ್ರಿಯೆ ನಡೀತಿರೋದನ್ನ ನೋಡಿ,, ಕೂಡ್ಲೆ ಬಸ್ ನಿಲ್ಲಿಸಿ ವಿಚಾರಿಸಿದಾಗ ವಿಚಾರ ತಿಳಿದಿದೆ.. ನಿಧನಗೊಂಡವರು ತಮ್ಮ ಮಾವ ಎಂಬುದು ಆಗ ಗೊತ್ತಾಗಿದೆ. ಗೋಳಿನ ಕತೆ ನೀವೇ ಕೇಳಿಕೊಂಡು ಬನ್ನಿ..