Raichur Ksheera Bhagya Scam: ಶಾಲೆಗಳ ನಕಲಿ ದಾಖಲೆ ಸೃಷ್ಟಿಸಿ ಹಾಲಿನ ಪುಡಿ ಗುಳಂ!
*ಕ್ಷೀರಭಾಗ್ಯ ಯೋಜನೆಯಲ್ಲಿ ಭಾರೀ ಗೋಲ್ಮಾಲ್!
*ಶಾಲೆಗಳ ನಕಲಿ ದಾಖಲೆಗಳು ಸೃಷ್ಟಿಸಿದ ಗುತ್ತಿಗೆದಾರ!
*14 ಶಾಲೆಗಳ ನಕಲಿ ಸಹಿ ಮಾಡಿ ಹಾಲಿನ ಪುಡಿ ಗುಳಂ!
*ಬಡಮಕ್ಕಳ ಹೊಟ್ಟೆ ಮೇಲೆ ಹೊಡೆದ ಗುತ್ತಿಗೆದಾರ
*ಗುತ್ತಿಗೆದಾರನ ವಿರುದ್ಧ ಸೈಬರ್ ಠಾಣೆಯಲ್ಲಿ ದೂರು ದಾಖಲು
ರಾಯಚೂರು (ಫೆ. 11): ಸರ್ಕಾರಿ ಶಾಲೆಗೆ ಬರುವ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನ ಕಡಿಮೆ ಮಾಡಲು ಸರ್ಕಾರ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದೆ. ಯೋಜನೆಯಂತೆ ಶಾಲೆಗೆ ಬರುವ ಬಡ ಮಕ್ಕಳಿಗೆ ಕೆಎಂಎಫ್ ನೀಡುವ ಕೆನೆಭರಿತ ಹಾಲು ವಿತರಣೆ ಮಾಡುತ್ತಾರೆ. ಮಕ್ಕಳ ಹಾಲಿನ ಪುಡಿಯೇ ಬಂಡವಾಳ ಮಾಡಿಕೊಂಡ ಗುತ್ತಿಗೆದಾರ ಆಕಾಶ್ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಒಟ್ಟು 14 ಶಾಲೆಗಳಿಗೆ ವಿತರಣೆ ಮಾಡಬೇಕಾದ 1,768 ಕೆಜಿ ಹಾಲಿನ ಪುಡಿ ಗುಳಂ ಮಾಡಿದ್ದಾನೆ.
ಇದನ್ನೂ ಓದಿ: Raichur: ಸೆಲ್ಕೋಯಿಂದ 252 ಆರೋಗ್ಯ ಕೇಂದ್ರಗಳಿಗೆ ಸೋಲಾರ್
ಸುಮಾರು 5 ಲಕ್ಷ 10 ಸಾವಿರ 510 ರೂ. ಮೌಲ್ಯದ ಹಾಲಿನ ಪುಡಿ ನುಂಗಿದ ಗುತ್ತಿಗೆದಾರ ಆಕಾಶ್ ಎಂ.ಗಾಣಗಿ. ಶಾಲೆಗಳ ನಕಲಿ ಮೊಹರ ಮತ್ತು 14 ಶಾಲೆಗಳ ಮುಖ್ಯಗುರುಗಳ ನಕಲಿ ಸಹಿ ಮಾಡಿ ಹಾಲಿನ ಪುಡಿ ವಿತರಣೆ ಮಾಡಿರುವುದಾಗಿ ಶಿಕ್ಷಣ ಇಲಾಖೆಗೆ ಹಾಗೂ ಕೆಎಂಎಫ್ಗೆ ದಾಖಲೆಗಳು ಕೂಡ ಸಲ್ಲಿಕೆ ಮಾಡಿದ್ದಾನೆ. ಇತ್ತ ಗುತ್ತಿಗೆದಾನ ನಡೆ ಬಗ್ಗೆ ಅನುಮಾನ ಬಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗಳಿಗೆ ಹಾಲಿನ ಪುಡಿ ಬಗ್ಗೆ ವಿಚಾರಣೆ ಮಾಡಿದ್ದಾಗ ಗುತ್ತಿಗೆದಾರ ಆಕಾಶ.ಎಂ.ಗಾಣಗಿಯ ನಿಜಬಣ್ಣ ಬಯಲಾಗಿದೆ. ಈ ಕುರಿತ ವರದಿ ಇಲ್ಲಿದೆ.