Asianet Suvarna News Asianet Suvarna News

ಬಸ್‌ನಲ್ಲಿ ನಿತ್ಯ ನೇತಾಡಿಕೊಂಡು ಹೋಗ್ತಾರೆ ವಿದ್ಯಾರ್ಥಿಗಳು, ಅಧಿಕಾರಿಗಳಿಗೆ ಜಾಣ ಕುರುಡು!

Sep 19, 2021, 2:56 PM IST

ಕೋಲಾರ (ಸೆ. 19):  ಬಸ್‌ನಲ್ಲಿ ಇದೇನ್ರಿ ಇದು, ಹೀಗೆ ನೇತಾಡಿಕೊಂಡು ಹೋಗ್ತಿದ್ದಾರಲ್ಲ ವಿದ್ಯಾರ್ಥಿಗಳು ಅಂತಿದೀರಾ.? ಫುಟ್ಬೋರ್ಡ್, ಮೇಲ್ಚಾವಣಿ, ಹಿಂಬದಿ ಏಣಿ, ಎಲ್ಲಿ ಜಾಗ ಸಿಗುತ್ತೋ ಅಲ್ಲಲ್ಲಿ ಹತ್ಕೊಂಡು ಹೋಗ್ತಿದ್ದಾರೆ. ಇದು ಶ್ರೀನಿವಾಸಪುರ -ಪುಂಗನೂರು ಮಾರ್ಗವಾಗಿ ಸಂಚರಿಸುವ ಬಸ್‌ನ ಅವಸ್ಥೆ. ವಿದ್ಯಾರ್ಥಿಗಳ ನಿತ್ಯದ ಗೋಳು. 

ಜೇನಿನೊಂದಿಗೆ ಬದುಕು ಕಟ್ಟಿಕೊಂಡ ಸಾಧಕ ರೈತರ ಕಥೆ

ಬಸ್‌ಗಳ ಕೊರತೆಯಿಂದ ವಿದ್ಯಾರ್ಥಿಗಳು  ಫುಟ್ ಬೋರ್ಡ್ ಹಾಗೂ ಹಿಂಬದಿಯ ಕಂಬಿಗಳ ಮೇಲೆ ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ.  ಪೊಲೀಸ್ ಹಾಗೂ RTO ಅಧಿಕಾರಿಗಳು ಕಣ್ಣಿದ್ದೂ ಕುರುಡುರಂತೆ ವರ್ತಿಸುತ್ತಿದ್ದಾರೆ.  ಎಷ್ಟು ಬಾರಿ ಮನವಿ ಮಾಡಿದ್ರೂ ಸಾರಿಗೆ ಇಲಾಖೆ ಹೆಚ್ಚಿನ ಬಸ್‌ಗಳನ್ನು ಹಾಕುತ್ತಿಲ್ಲ.