Asianet Suvarna News Asianet Suvarna News

India@75: ಕೋಲಾರದಲ್ಲಿ ಲಿಮ್ಕಾ ದಾಖಲೆ ಸೇರಿದ ರಾಷ್ಟ್ರಧ್ವಜ

ಕೋಲಾರದಲ್ಲಿ ಮಾತ್ರ 75 ನೇ ಸ್ವಾತಂತ್ರ್ಯೋತ್ಸವಕ್ಕೆ ದೇಶದಲ್ಲಿ ಅತಿ ದೊಡ್ಡದಾದ  ಧ್ವಜವನ್ನು ನಿರ್ಮಾಣ ಮಾಡಲಾಗಿದೆ. ಈ ಬೃಹತ್​ ಧ್ವಜ ಲಿಮ್ಕಾ ಬುಕ್​ ಆಫ್​ ರೆಕಾರ್ಡ್ ಸೇರಿದೆ.

ಕೋಲಾರ (ಆ.15): ದೇಶಕ್ಕೆ ಸ್ವತಂತ್ರ್ಯ ಬಂದು 75 ವರ್ಷಗಳು ಪೂರೈಸಿರುವ ಹಿನ್ನೆಲೆ  ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮ ಮಾಡಲಾಗುತ್ತಿದೆ. ಕೋಲಾರದಲ್ಲಿ ಮಾತ್ರ 75 ನೇ ಸ್ವಾತಂತ್ರ್ಯೋತ್ಸವವನ್ನು ವಿಭಿನ್ನವಾಗಿ ಆಚರಣೆ ಮಾಡಲಾಗಿದೆ. ದೇಶದಲ್ಲಿ ಅತಿ ದೊಡ್ಡದಾದ  ಧ್ವಜವನ್ನು ನಿರ್ಮಾಣ ಮಾಡಲಾಗಿದೆ. ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಸುಮಾರು 25ಕ್ಕೂ ಹೆಚ್ಚಿನ ಕಾರ್ಮಿಕರು ಈ ಧ್ವಜ ನಿರ್ಮಾಣ ಮಾಡಿದ್ದಾರೆ. ಈ ಬೃಹತ್​ ಧ್ವಜ ಲಿಮ್ಕಾ ಬುಕ್​ ಆಫ್​ ರೆಕಾರ್ಡ್ ಸೇರಿದೆ.

INDIA@75: ಚಳವಳಿಗಾರರ ಬಂಧಿಸಿಡುತ್ತಿದ್ದ ಸೆಂಟ್ರಲ್‌ ಜೈಲ್‌ ಈಗ ಸ್ವಾತಂತ್ರ್ಯ ಉದ್ಯಾನವನ

ಈ ಬೃಹತ್​ ಧ್ವಜ 204 ಅಡಿ ಉದ್ದ 630 ಅಡಿ ಅಗಲವಿದ್ದು ಒಟ್ಟು 1.30 ಲಕ್ಷ ಚದರಡಿ ವಿಸ್ತೀರ್ಣ ಹೊಂದಿದೆ. ಇನ್ನು ಧ್ವಜ ಮೇಲಿನ ಅಶೋಕ ಚಕ್ರ 60-60 ಅಂದರೆ 3400 ಚದರಡಿ ವಿಸ್ತೀರ್ಣ ಹೊಂದಿದೆ. ಇನ್ನು ಈ ಧ್ವಜ ನಿರ್ಮಾಣಕ್ಕಾಗಿ ಸುಮಾರು 13,000 ಮೀಟರ್ ಬಟ್ಟೆ ಬಳಸಲಾಗಿದೆ.  ಇದು ಸುಮಾರು 3 ಟನ್​ ನಷ್ಟ ತೂಕ ಹೊಂದಿದೆ. ಆಗಸ್ಟ್​-15 ರಂದು ಕೋಲಾರದ ಸರ್​.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಈ ಬೃಹತ್​ ಧ್ವಜವನ್ನು 2000 ಜನ ಹಿಡಿದು ಅನಾವರಣ ಮಾಡಿದ್ದಾರೆ.
 

Video Top Stories