ಎದುರಿಗಿರುವ ವಸ್ತುಗಳನ್ನು ಸೆನ್ಸ್‌ ಮಾಡುತ್ತೆ, ಅಂಧರಿಗಾಗಿ ವಿಶೇಷ ಕನ್ನಡಕ ತಯಾರಿಸಿದ ವಿದ್ಯಾರ್ಥಿ

ವೀರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ 9 ನೇ ವ್ಯಾಸಂಗ ಮಾಡುತ್ತಿರುವ ದೀಕ್ಷಿತ್ ಕಳೆದ ಎರಡು ತಿಂಗಳಿಂದ ಈ ಕನ್ನಡಕ ತಯಾರಿಸಲು ಸಾಕಷ್ಟು ಶ್ರಮ ಪಟ್ಟಿದ್ದಾನೆ. ಅದರ ಫಲವಾಗಿ ಕೊನೆಗೂ ಕಣ್ಣಿಲ್ಲದವರಿಗೆ ಈ ವಿನೂತನವಾದ ಕನ್ನಡಕ ಕಂಡು ಹಿಡಿದಿದ್ದಾನೆ. 

First Published Mar 11, 2022, 1:21 PM IST | Last Updated Mar 11, 2022, 1:59 PM IST

ಮಡಿಕೇರಿ (ಮಾ. 11): ಸಾಮಾನ್ಯವಾಗಿ ಅಂದರು ಕಣ್ಣಿಗೆ ಕಪ್ಪು ಕನ್ನಡಕ ಹಾಕಿರುತ್ತಾರೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಲ್ಲ.ಆದರೆ ಇಲ್ಲಿ ವಿದ್ಯಾರ್ಥಿಯೊಬ್ಬ ಅಂದರಿಗಾಗಿ ಕನ್ನಡಕವೊಂದನ್ನು ಕಂಡು ಹಿಡಿದಿದ್ದಾನೆ.ಈ ಕನ್ನಡಕ ಹಾಕಿಕೊಂಡರೆ ಎದುರಿಗೆ ಏನೇ ಇದ್ದರು ಅಂದರಿಗೆ ಸೂಚನೆ ನೀಡುತ್ತದೆ. 

ವೀರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ 9 ನೇ ವ್ಯಾಸಂಗ ಮಾಡುತ್ತಿರುವ ದೀಕ್ಷಿತ್ ಕಳೆದ ಎರಡು ತಿಂಗಳಿಂದ ಈ ಕನ್ನಡಕ ತಯಾರಿಸಲು ಸಾಕಷ್ಟು ಶ್ರಮ ಪಟ್ಟಿದ್ದಾನೆ. ಅದರ ಫಲವಾಗಿ ಕೊನೆಗೂ ಕಣ್ಣಿಲ್ಲದವರಿಗೆ ಈ ವಿನೂತನವಾದ ಕನ್ನಡಕ ಕಂಡು ಹಿಡಿದಿದ್ದಾನೆ. ಈ ಕನ್ನಡಕದ ವಿಶೇಷತೆ ಏನು ಅಂತ ನೋಡೋದಾದರೆ, ಇದನ್ನು ಹಾಕಿ ನಡೆಯುತ್ತಿದ್ದರೆ ಮುಂದೆ ಏನೇ ಇದ್ದರೂ ಒಂದು ಮೀಟರ್ ದೂರದಲ್ಲಿಯೇ ವಿಶಲ್ ಹಾಕುತ್ತೆ ಅಂದರೆ ಬೀಪ್ ಶಬ್ದ ಬರುತ್ತದೆ. ಇದರಿಂದ ಮುಂದೆ ಏನೋ ಅಡೆತಡೆ ಇದೆ ಎಂದು ಅಂದರಿಗೆ ಅರಿವಾಗುತ್ತದೆ. ಈ ಕನ್ನಡಕಕ್ಕೆ ಚಾರ್ಜಿಂಗ್ ವ್ಯವಸ್ಥೆ ಇದೆ. ಜೊತೆಗೆ ಐದು ಗಂಟೆ ಬಿಸಿಲಿನಲ್ಲಿಟ್ಟರೆ ಸೂರ್ಯನ ಕಿರಣಗಳಿಂದಲೂ ಚಾರ್ಜ್ ಆಗುತ್ತದೆ. ಆದ್ದರಿಂದ ಅಂಧರು  ಈ ಕನ್ನಡಕ ಹಾಕಿಕೊಂಡರೆ ಯಾವುದೇ ಅಪಾಯವಿಲ್ಲದೆ ಮುಂದೆ ಸಾಗಬಹುದಾಗಿದೆ.

Chikkamagaluru: ರೋಪ್‌ ವೇ, ಸರ್ಕಾರದ ಘೋಷಣೆಗೆ ಪರಿಸರವಾದಿಗಳಿಂದ ತೀವ್ರ ವಿರೋಧ

 ಇನ್ನೂ  ಈ ಕನ್ನಡಕ ತಯಾರಿಸಲು ಬೇಕಾದ ಪರಿಕರಗಳನ್ನು ಆನ್​ಲೈನ್ ಮೂಲಕ ತರಿಸಲಾಗಿದೆ. ಒಂದು ಕನ್ನಡಕ ತಯಾರಿಕೆಗೆ ಸುಮಾರು ಒಂದು ಸಾವಿರ ರೂ ಖರ್ಚಾಗುತ್ತದೆ. ಮಗನ ಈ ಸಾಧನೆಗೆ ಪೋಷಕರು ಹರ್ಷ ವ್ಯಕ್ತಪಡಿಸಿದರೆ ನಮ್ಮ ಶಾಲೆಯಲ್ಲಿ ಇಂತಹ ಪ್ರತಿಭೆ ಇರೋದು ಗೊತ್ತಿರಲಿಲ್ಲ.ಈಗ ತುಂಬಾ ಹೆಮ್ಮೆಯಾಗುತ್ತಿದೆ ಎನ್ನುತ್ತಿದ್ದಾರೆ ಶಿಕ್ಷಕ ವೃಂದದವರು. ಈ ಕನ್ನಡಕವನ್ನು ಮತ್ತಷ್ಟು ಅಭಿವೃದ್ದಿಪಡಿಸಲು ಈ ಯುವಕ ಮುಂದಾಗಿದ್ದಾನೆ. ಶಾಲೆ ಎಂದರೆ ಕೇವಲ ಓದು ಮಾತ್ರ ಅಲ್ಲ. ಅದರ ಜೊತೆಗೆ ಇಂತಹ ವಿಶೇಷ ಪ್ರತಿಭೆಗಳಿಗೆ ಶಾಲೆ ಒಂದು ಉತ್ತಮ ವೇದಿಕೆಯನ್ನು ನೀಡುತ್ತದೆ. ಅದಕ್ಕೆ  ಈ ವಿದ್ಯಾರ್ಥಿ ಸಾಕ್ಷಿಯಾಗಿದ್ದಾನೆ ಎನ್ನುತ್ತಾರೆ ಶಿಕ್ಷಕರು.