ಕೊಡಗು: ರಿವರ್ ರ್ಯಾಫ್ಟಿಂಗ್ ಸ್ಥಗಿತ, ಪ್ರವಾಸಿಗರಿಗೆ ನಿರಾಸೆ, ಮಾಲಿಕರಿಗೆ ತಲೆಬಿಸಿ..!

ಮಳೆಗಾಲದಲ್ಲಿ ಪ್ರವಾಸಿಗರನ್ನು ಜಲಕ್ರೀಡೆಗಳು, ರಿವರ್ ರ್ಯಾಫ್ಟಿಂಗ್ ಆಕರ್ಷಿಸುತ್ತದೆ. ಅದರಲ್ಲೂ ರಿವರ್ ರ್ಯಾಫ್ಟಿಂಗ್‌ಗೆ ಕೊಡಗಿನ ಬರಪೊಳೆ, ದುಬಾರೆ ಕಾವೇರಿ ನದಿ ಹೇಳಿ ಮಾಡಿಸಿದ ನದಿಗಳು. 

Share this Video
  • FB
  • Linkdin
  • Whatsapp

ಕೊಡಗು (ಆ. 02): ರಾಜ್ಯದಲ್ಲಿ ಕೋವಿಡ್ ಲಾಕ್​ಡೌನ್ ಅನ್​ಲಾಕ್ ಆದ ನಂತರ ಎಲ್ಲಾ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಅದರಂತೆ ಪ್ರವಾಸೋದ್ಯಮ ಚಟುವಟಿಕೆಗಳಿಗೂ ಅನುಮತಿ ಸಿಕ್ಕಿದ್ದು, ಕೊಡಗಿನಲ್ಲಿ ಜಲಕ್ರೀಡೆ ಕೂಡ ಆರಂಭವಾಗಿತ್ತು. ಆದ್ರೆ ಇದೀಗ ಸರಕಾರದ ಮಾರ್ಗಸೂಚಿಯಿಂದ ಮತ್ತೆ ಜಲಕ್ರೀಡೆ ಸ್ಥಗಿತವಾಗಿದೆ. ಪರಿಣಾಮ ಪ್ರವಾಸಿಗರಿಗೆ ನಿರಾಸೆಯಾದರೆ ಮಾಲೀಕರು ಅವಕಾಶಕ್ಕಾಗಿ ಮನವಿ ಮಾಡುತ್ತಿದ್ದಾರೆ.

Related Video