Karwar: ಆಟವಾಡೋವಾಗ ಸ್ಲೈಡಿಂಗ್ ಗೇಟ್ ತಲೆಯ ಮೇಲೆ ಬಿದ್ದು ಕಂದಮ್ಮ ಸಾವು!
ಕಾರವಾರ ತಾಲೂಕಿನಲ್ಲಿ ಆಟವಾಡುತ್ತಿದ್ದ ಐದು ವರ್ಷದ ಬಾಲಕನ ತಲೆಯ ಮೇಲೆ ಸ್ಲೈಡಿಂಗ್ ಗೇಟ್ ಬಿದ್ದು ಮೃತಪಟ್ಟಿದ್ದಾನೆ. ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಈ ಘಟನೆ ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾರವಾರ (ಡಿ.5): ಮಕ್ಕಳು ಆಟವಾಡೋವಾಗ ಎಷ್ಟು ಎಚ್ಚರಿಕೆಯಿದ್ದರೂ ಸಾಲದು ಅನ್ನೋದಕ್ಕೆ ಉದಾಹರಣೆ ಇದು. ಕಾರವಾರ ತಾಲೂಕಿನ ಬಬ್ರುವಾಡ ಗ್ರಾ.ಪಂ. ವ್ಯಾಪ್ತಿಯ ಕನಸಿಗದ್ದೆಯಲ್ಲಿ ಆಟವಾಡುತ್ತಿದ್ದ 5 ವರ್ಷದ ಬಾಲಕನ ತಲೆಯ ಮೇಲೆ ಸ್ಲೈಂಡಿಂಗ್ ಗೇಟ್ ಬಿದ್ದ ದಾರುಣ ಸಾವು ಕಂಡಿದ್ದಾನೆ.
ಆಜಮ್ ಜಾವೇದ್ ಶೇಕ್ ಮೃತಪಟ್ಟ ಬಾಲಕ. ಆಟವಾಡುತ್ತಿದ್ದ ಸಂದರ್ಭ ಮನೆಯ ಮುಂದಿನ ಗೇಟ್ ಮುರಿದು ಮಗು ತಲೆಯ ಮೇಲೆ ಬಿದ್ದಿತ್ತು. ಕೂಡಲೇ ಮಗುವನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಗುವಿನ ತಲೆಯ ಭಾಗಕ್ಕೆ ಹೆಚ್ಚಿನ ಪೆಟ್ಟು ಬಿದ್ದಿರುವುದರಿಂದ ಬೇರೆ ಆಸ್ಪತ್ರೆಗೆ ಸಾಗಿಸಲು ಸೂಚನೆ ನೀಡಿದ್ದರು.
Bengaluru: 2160 ಕೋಟಿಗೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪಾಲು ಖರೀದಿಸಿದ ಕೆನಡಾ ಕೋಟ್ಯಧಿಪತಿ!
ಮಣಿಪಾಲದ ಆಸ್ಪತ್ರೆಗೆ ತೆರಳುತ್ತಿರುವ ಸಂದರ್ಭ ಮಾರ್ಗ ಮಧ್ಯೆ ಹೊನ್ನಾವರದಲ್ಲಿ ಮಗು ಸಾವು ಕಂಡಿದೆ. ಬಾಲಕನಿಗೆ ಎರಡು ಹಿರಿಯ ಸಹೋದರಿಯರಿದ್ದು, ಈತನೇ ಚಿಕ್ಕವನಾಗಿದ್ದ. ತಂದೆ ಚಾಲಕ ವೃತ್ತಿ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧಿಸಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.