ಯಕ್ಷಗಾನ ಕಲೆಗೆ ಮೋಹಿತರಾಗಿ ವೇಷ ಧರಿಸಿದ ಆರೋಗ್ಯ ಸಚಿವ ಸುಧಾಕರ್

ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಯಕ್ಷಗಾನ ಕಲೆಗೆ ಮಾರು ಹೋಗಿ  ಕಲೆಯ ಕಲಾಕಾರರು ಧರಿಸುವ ವೇಷ ಧರಿಸಿ ಮಿಂಚಿದ ಅಪರೂಪದ ಘಟನೆ ಭಟ್ಕಳದಲ್ಲಿ ನಡೆಯಿತು. ಬಡಗುತಿಟ್ಟು ಯಕ್ಷಗಾನದ ಪೋಷಾಕು ಧರಿಸಿ  ಸಚಿವ ಡಾ. ಸುಧಾಕರ್ ಸನ್ಮಾನ ಸ್ವೀಕರಿಸಿದರು.

First Published Oct 12, 2022, 7:45 PM IST | Last Updated Oct 12, 2022, 7:45 PM IST

ಉತ್ತರಕನ್ನಡ(ಕಾರವಾರ): ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಯಕ್ಷಗಾನ ಕಲೆಗೆ ಮಾರು ಹೋಗಿ  ಕಲೆಯ ಕಲಾಕಾರರು ಧರಿಸುವ ವೇಷ ಧರಿಸಿ ಮಿಂಚಿದ ಅಪರೂಪದ ಘಟನೆ ಭಟ್ಕಳದಲ್ಲಿ ನಡೆಯಿತು. ಬಡಗುತಿಟ್ಟು ಯಕ್ಷಗಾನದ ಪೋಷಾಕು ಧರಿಸಿ  ಸಚಿವ ಡಾ. ಸುಧಾಕರ್ ಸನ್ಮಾನ ಸ್ವೀಕರಿಸಿದರು.


ನಿನ್ನೆ ಉತ್ತರಕನ್ನಡ (Uttara Kannada) ಜಿಲ್ಲೆಯ ಕಾರವಾರ (Karawara) ಹಾಗೂ ಕುಮುಟಾಕ್ಕೆ (Kumta)ಭೇಟಿ ನೀಡಿದ್ದ ಡಾ‌‌. ಸುಧಾಕರ್ (Dr. Sudhakar) ರಾತ್ರಿ ಭಟ್ಕಳದ ಸಮುದಾಯ ಆಸ್ಪತ್ರೆಗೆ (Bhatkala Comunity Hospital) ಭೇಟಿ ನೀಡಿದ್ದರು. ಅಲ್ಲಿಂದ ತೆರಳಿದ ಸಚಿವ ಡಾ.‌ಸುಧಾಕರ್, ಭಟ್ಕಳ ಶಾಸಕ ಸುನೀಲ್ ನಾಯ್ಕ್ (Sunil Naik) ಅವರ ಮನೆಯಲ್ಲಿ ತಂಗಿದ್ದರು. ಆರೋಗ್ಯ ಸಚಿವರಿಗೆ (Health Minister) ಭರ್ಜರಿ ಸ್ವಾಗತ ನೀಡಿದ್ದ ಸುನೀಲ್ ನಾಯ್ಕ್, ರಾತ್ರಿ ಮನೆಯಲ್ಲಿ ಬಡಗುತಿಟ್ಟು ಯಕ್ಷಗಾನ (Badagutittu Yakshagana)ಆಯೋಜಿಸಿದ್ದರು. 

ಭಟ್ಕಳದಲ್ಲಿ ನಿನ್ನೆ ರಾತ್ರಿ ಭಾರೀ ಮಳೆ ಸುರಿದಿದ್ದರೂ ಯಕ್ಷಗಾನ ಮುಗಿಯುವರೆಗೆ ಕುಳಿತು ನೋಡಿದ್ದ ಆರೋಗ್ಯ ಸಚಿವರು ಯಕ್ಷಗಾನ ಕಲೆಗೆ ಮರು ಹೋಗಿದ್ದಾರೆ. ಆರೋಗ್ಯ ಸಚಿವರಿಗೆ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ್ ನಾಯ್ಕ್ ಸಾಥ್‌ ನೀಡಿದ್ದರು. ಯಕ್ಷಗಾನ ಮುಗಿದ ಬಳಿಕ ಇತರರ ಸಹಾಯದಿಂದ ಸಚಿವ ಸುಧಾಕರ್ ಕಲಾವಿದರ ಪೋಷಾಕು ಧರಿಸಿದರು. ಅಲ್ಲದೇ ಆ ಪೋಷಾಕಿನಲ್ಲಿಯೇ ಸನ್ಮಾನ ಸ್ವೀಕರಿಸಿದರು. 

ಯಕ್ಷಗಾನದ ವೇದಿಕೆಯಲ್ಲಿ ಬಡಗುತಿಟ್ಟು ಪೋಷಾಕು ಧರಿಸಿ ಮಿಂಚಿದ ಆರೋಗ್ಯ ಸಚಿವ ಡಾ.‌ಸುಧಾಕರ್ ಅವರು ನಂತರ ಇಂದು ಇಂದು ಬೆಳಗ್ಗೆ ಮಂಗಳೂರು ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

Video Top Stories