Asianet Suvarna News Asianet Suvarna News

ಕೆಂಗೇರಿ ಮೆಟ್ರೋ ಆರಂಭ: ವೇದಿಕೆಯಲ್ಲಿ ಕನ್ನಡವೇ ಮಾಯ!

ನಾಯಂಡಹಳ್ಳಿಯಿಂದ ಕೆಂಗೇರಿ ಮೆಟ್ರೋ ಮಾರ್ಗಕ್ಕೆ ಚಾಲನೆ ಸಿಕ್ಕಿದೆ. ಆದರೆ ವೇದಿಕೆ ಕಾರ್ಯಕ್ರಮದಲ್ಲಿ ಕನ್ನಡವೇ ಮಾಯವಾಗಿದೆ. ಹೌದು ಮುಖ್ಯ ವೇದಿಕೆಯಲ್ಲಿ ಸಂಪೂರ್ಣ ಇಂಗ್ಲೀಷ್ ಬಳಕೆಯಾಗಿದೆ. 

ಬೆಂಗಳೂರು(ಆ.29): ನಾಯಂಡಹಳ್ಳಿಯಿಂದ ಕೆಂಗೇರಿ ಮೆಟ್ರೋ ಮಾರ್ಗಕ್ಕೆ ಚಾಲನೆ ಸಿಕ್ಕಿದೆ. ಆದರೆ ವೇದಿಕೆ ಕಾರ್ಯಕ್ರಮದಲ್ಲಿ ಕನ್ನಡವೇ ಮಾಯವಾಗಿದೆ. ಹೌದು ಮುಖ್ಯ ವೇದಿಕೆಯಲ್ಲಿ ಸಂಪೂರ್ಣ ಇಂಗ್ಲೀಷ್ ಬಳಕೆಯಾಗಿದೆ. 

ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿವರೆಗಿನ 7.5 ಕಿಮೀ ಉದ್ದದ ‘ನಮ್ಮ ಮೆಟ್ರೋ’ ರೈಲು ಸೇವೆಗೆ ಚಾಲನೆ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ನಗರ ವ್ಯವಹಾರಗಳ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಅವರು ನೂತನ ಮಾರ್ಗವನ್ನು ಉದ್ಘಾಟಿಸಿದ್ದಾರೆ. ಇದರೊಂದಿಗೆ ನಗರದ ಪೂರ್ವ-ಪಶ್ಚಿಮ ಭಾಗಕ್ಕೆ ಸಂಚಾರ ಮತ್ತಷ್ಟು ಸುಗಮವಾಗಿದೆ.