ಬಳ್ಳಾರಿ: ಜಿಂದಾಲ್‌ ಉದ್ಯೋಗಿ ಮಹಾಮಾರಿ ಕೊರೋನಾಗೆ ಬಲಿ

ಕೋವಿಡ್‌ ಸೋಂಕಿಗೆ ಜಿಂದಾಲ್‌ ನೌಕರ ಸಾವು| ಬೆಂಗಳೂರಿನಲ್ಲಿ ಮೃತಪಟ್ಟ 53 ವರ್ಷದ ಜಿಂದಾಲ್‌ ಉದ್ಯೋಗಿ| ಕೊರೋನಾ ಸೋಂಕು ತಗುಲಿದ್ದು ಬೆಂಗಳೂರಿನಲ್ಲಿ ಎಂದ ಜಿಂದಾಲ್‌ ಕಂಪನಿಯ ಉಪಾಧ್ಯಕ್ಷ ಮಂಜುನಾಥ ಪ್ರಭು|

First Published Jun 15, 2020, 11:30 AM IST | Last Updated Jun 15, 2020, 11:31 AM IST

ಬಳ್ಳಾರಿ(ಜೂ.15): ಜಿಲ್ಲೆಯ ಜಿಂದಾಲ್‌ ಕಾರ್ಖಾನೆಯಲ್ಲಿ 53 ವರ್ಷದ ಉದ್ಯೋಗಿಯಾಗಿದ್ದ ನೌಕರ ಮಹಾಮಾರಿ ಕೊರೋನಾಗೆ ಬಲಿಯಾಗಿದ್ದಾರೆ. ಆದರೆ, ಮೃತಪಟ್ಟಿರೋದು ಬೆಂಗಳೂರಿನಲ್ಲಿ ಎಂದು ತಿಳಿದು ಬಂದಿದೆ. ಇವರಿಗೆ ಕೊರೋನಾ ಸೋಂಕು ತಗುಲಿದ್ದು ಬೆಂಗಳೂರಿನಲ್ಲಿ ಎಂದು ಜಿಂದಾಲ್‌ ಕಂಪನಿಯ ಉಪಾಧ್ಯಕ್ಷ ಮಂಜುನಾಥ ಪ್ರಭು ತಿಳಿಸಿದ್ದಾರೆ.

ಕೊರೋನಾ ವಿರುದ್ಧ ಮಯ್ಯಾಸ್ ಹೋರಾಟ; ಗ್ರಾಹಕರ ಆರೋಗ್ಯ ಸುರಕ್ಷತೆಗೆ ಆದ್ಯತೆ!

ಬಳ್ಳಾರಿಯ ಜಿಂದಾಲ್‌ ಕಾರ್ಖಾನೆಯಲ್ಲಿ ಕೆಲಸ ಮಾಡುವ ವೇಳೆ ಅವರಿಗೆ ಯಾವುದೇ ಸೋಂಕು ಇರಲಿಲ್ಲ, ತಾಯಿ ಅನಾರೋಗ್ಯದ ನಿಮಿತ್ತ ಮೃತ ನೌಕರ ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರಿನಲ್ಲಿದ್ದಾಗಲೇ ಅವರಿಗೆ ಕೊರೋನಾ ಸೋಂಕು ತಗುಲಿತ್ತು ಎಂದು ಸ್ಪಷ್ಟಣೆ ನೀಡಿದ್ದಾರೆ. 
 

Video Top Stories