'ಬಿಜೆಪಿಯವ್ರು ಪೌರತ್ವ ಕೊಡ್ತೀವಿ ಅಂತಾರೆ, ಆಚೆನೂ ಹಾಕ್ತಾರೆ'

ಬಾಂಗ್ಲಾ ವಲಸಿಗರಿಗೆ ಉಳಿದುಕೊಳ್ಳಲು ಜಾಗ ಕೊಟ್ಟವರೂ ಇವರೇ, ಈಗ ಓಡಿಸುತ್ತಿರುವವರೂ ಇವರೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಬಾಂಗ್ಲಾ ವಲಸಿಗರ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

Share this Video
  • FB
  • Linkdin
  • Whatsapp

ಮೈಸೂರು(ಜ.22): ಬಾಂಗ್ಲಾ ವಲಸಿಗರಿಗೆ ಉಳಿದುಕೊಳ್ಳಲು ಜಾಗ ಕೊಟ್ಟವರೂ ಇವರೇ, ಈಗ ಓಡಿಸುತ್ತಿರುವವರೂ ಇವರೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಬಾಂಗ್ಲಾ ವಲಸಿಗರ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಬಾಂಗ್ಲಾ ವಲಸಿಗರ ತೆರವು ವಿಚಾರವಾಗಿ ಪ್ರತಿಕ್ರಿಯಿಸಿ, ಅವರಿಗೆ ಮೊದಲು ಉಳಿದುಕೊಳ್ಳಲು ಸ್ಥಳ ಕೊಟ್ಟವರು ಇವರೇ. ಈಗ ಅವರನ್ನು ಓಡಿಸುವವರು ಇವರೇ. ಇದು ಯಾವ ರೀತಿ ನಿಲುವು ಎಂದು ಪ್ರಶ್ನಿಸಿದ್ದಾರೆ.

ಸುತ್ತೂರಿನಲ್ಲಿ ಸಾಮೂಹಿಕ ವಿವಾಹ: ಸಪ್ತಪದಿ ತುಳಿದ 178 ಜೋಡಿ

ಇದು ಅವರ ದ್ವಂದ ನಿಲುವನ್ನು ತೋರಿಸುತ್ತದೆ. ಸಿಎಎ ಕಾಯ್ದೆಯಡಿ ಬಾಂಗ್ಲಾದಿಂದ ಬಂದವರಿಗೆ ಪೌರತ್ವ ಕೊಡುತ್ತೇವೆ ಎನ್ನುತ್ತಾರೆ‌. ಈಗ ಅವರನ್ನೆ ಓಡಿಸಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದು ಹೇಳಿದ್ದಾರೆ.

Related Video