ಬೆಂಗಳೂರು ವಾಹನ ಸವಾರರೇ ಎಚ್ಚರ: ಇನ್ಮುಂದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ದಂಡ ಫಿಕ್ಸ್
ಟ್ರಾಫಿಕ್ ಪೊಲೀಸರು ITMS ನೂತನ ಸಿಸ್ಟಮ್ ಅಳವಡಿಸಿಕೊಂಡಿದ್ದು, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ದಂಡ ಫಿಕ್ಸ್.
ಬೆಂಗಳೂರು; ಬೆಂಗಳೂರಿನ ಸಿಗ್ನಲ್'ಗಳಲ್ಲಿ ರೂಲ್ಸ್ ಬ್ರೇಕ್ ಮಾಡಿದರೆ ಇನ್ಮುಂದೆ ವಿಡಿಯೋ ಸಮೇತ ದಂಡ ಬೀಳಲಿದೆ. ಟ್ರಾಫಿಕ್ ಪೊಲೀಸರು ITMS ನೂತನ ಸಿಸ್ಟಮ್ ಅಳವಡಿಸಿಕೊಂಡಿದ್ದು, ಸಿಗ್ನಲ್ ಅಲ್ಲಿ ಪೊಲೀಸರು ಇಲ್ಲ ಎಂದು ಜಂಪ್ ಮಾಡಿದರೆ ಕೇಸ್ ಬೀಳುತ್ತೆ. ಈಗಾಗಲೇ 50 ಜಂಕ್ಷನ್'ಗಳಲ್ಲಿ 250 ITMS ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ತ್ರಿಬಲ್ ರೈಡಿಂಗ್ ಮಾಡಿದರೆ ಬೈಕ್‌ನಲ್ಲಿರುವ ಎಲ್ಲರ ಫೋಟೊ ಕವರ್ ಆಗುತ್ತೆ. ನಂಬರ್ ಪ್ಲೇಟ್ ಸಮೇತ ವಿಡಿಯೋ ರೆಕಾರ್ಡ್ ಆಗುತ್ತೆ. ಸೀಟ್ ಬೆಲ್ಟ್ ಹಾಕದಿರೋ ಕಾರೂ ಚಾಲಕನ ಮೇಲೆ ಕಣ್ಣು ಇಡಲಾಗಿದೆ. ರೂಲ್ಸ್ ಬ್ರೇಕ್ ಮಾಡಿದ ಕೂಡಲೇ 5 ಸೆಕೆಂಡ್‌ನಲ್ಲಿ ವಿಡಿಯೋ ಜೊತೆ ಫೈನ್ ಬೀಳಲಿದೆ. ಕ್ಯೂ ಆರ್ ಕೋಡ್ ಮೂಲಕ ಫೈನ್ ಕಟ್ಟಬೇಕು.