ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಕೊಪ್ಪಳದ ಗವಿಮಠ ಜಾತ್ರೆ
ಸ್ವಚ್ಛ ಮಾಡುವ ಮಹಿಳಾ ಪೌರಕಾರ್ಮಿಕರಿಗೆ ಉಡಿ ತುಂಬಿ ಸತ್ಕರಿಸಿದ ಟಿಫನ್ ಸೆಂಟರ್ ಮಾಲೀಕರು|ಕೊಪ್ಪಳದ ಗವಿಮಠ ಜಾತ್ರೆಯಲ್ಲಿ ನಡೆದ ವಿನೂತನ ಕಾರ್ಯಕ್ರಮ| ಅಪ್ಪಾಜಿ ಕ್ಯಾಂಟೀನ್‌ನಿಂದ ಪೌರ ಕಾರ್ಮಿಕರಿಗೆ ಉಪಹಾರದ ವ್ಯವಸ್ಥೆ|
ಕೊಪ್ಪಳ(ಜ.19): ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಗಳಿಸಿರುವ ಕೊಪ್ಪಳದ ಗವಿಮಠದ ಜಾತ್ರೆಯಲ್ಲಿ ಸ್ವಚ್ಛ ಮಾಡುವ ಮಹಿಳಾ ಪೌರಕಾರ್ಮಿಕರಿಗೆ ಟಿಫನ್ ಸೆಂಟರ್ ಮಾಲೀಕರು ಉಡಿ ತುಂಬಿ ಗೌರವಿಸಿದ್ದಾರೆ. ಈ ಮೂಲಕ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ವಿನೂತನ ಕಾರ್ಯಕ್ಕೆ ಸಾಕ್ಷಿಯಾಗಿದೆ. ಅಪ್ಪಾಜಿ ಕ್ಯಾಂಟೀನ್‌ನಿಂದ ಪೌರ ಕಾರ್ಮಿಕರಿಗೆ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಗವಿ ಮಠದ ಶ್ರೀಗಳು; ಕೇಳಿ ಕ್ರಾಂತಿಯ ಕಥೆ!
ಗವಿಮಠದ ಶ್ರೀಗಳ ಸಮ್ಮುಖದಲ್ಲಿ ಉಪಹಾರ ವಿತರಣೆ ಮಾಡಿ ಮಹಿಳಾ ಪೌರಕಾರ್ಮಿಕರಿಗೆ ಉಡಿ ತುಂಬಿ ಗೌರವಿಸಿದ್ದಾರೆ. ಮಹಿಳೆಯರಿಗೆ ಉಡಿ ತುಂಬಿ ಸೀರೆ ಕೊಟ್ಟು ಸತ್ಕರಿಸಲಾಗಿದೆ. ಪುರುಷ ಪೌರಕಾರ್ಮಿಕರಿಗೆ ಬಟ್ಟೆ ನೀಡಿ ಗೌರವಿಸಲಾಗಿದೆ.