Asianet Suvarna News Asianet Suvarna News

Stop Illegal Mining: ದ.ಕ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ಡಿ. ಸಿ ಕೊರಳ ಪಟ್ಟಿ ಹಿಡಿತೀವಿ: ಜಗದೀಶ್ ಕಾರಂತ್

- ಬಂಟ್ವಾಳದ ಕಾರಿಂಜೇಶ್ವರ ದೇವಸ್ಥಾನ ಉಳಿಸಿ ಹೋರಾಟದಲ್ಲಿ ಜಗದೀಶ್ ಕಾರಂತ ಕಿಡಿ

- ಕಾರಿಂಜೇಶ್ವರ ದೇವಸ್ಥಾನದ ಸುತ್ತಮುತ್ತ ಕಲ್ಲು ಗಣಿಗಾರಿಕೆ ನಿಲ್ಲಿಸಲು ನಡೆದ ಬೃಹತ್ ಪ್ರತಿಭಟನೆಯಲ್ಲಿ ವಾಗ್ದಾಳಿ

- ಹಿಂದೂ ಜಾಗರಣಾ ವೇದಿಕೆ ಮುಖಂಡ ಜಗದೀಶ್ ಕಾರಂತ್ ಪ್ರಚೋದನಕಾರಿ ಮಾತು

ಮಂಗಳೂರು (ನ. 22): ಬಂಟ್ವಾಳ (Bantwal) ತಾಲೂಕಿನ ವಗ್ಗ ಗ್ರಾಮದಲ್ಲಿ ಬರುವ ಕಾರಿಂಜೀಶ್ವರ  ಕ್ಷೇತ್ರದ ತಪ್ಪಲಿನಲ್ಲಿ ಅಕ್ರಮ ಗಣಿಗಾರಿಕೆ (Illegal Mining) ನಡೆಯುತ್ತಿದ್ದು ಇದು ಕ್ಷೇತ್ರದಲ್ಲಿರೊ ದೇವಸ್ಥಾನಕ್ಕೆ ಧಕ್ಕೆ ತರುತ್ತಿದೆ ಅನ್ನೊ ಆರೋಪ ಕೇಳಿ ಬಂದಿದೆ.  ಈ ದೇವಸ್ಥಾನದ ಬುಡದಲ್ಲೇ ಭಾರೀ ಪ್ರಮಾಣದ ಸ್ಟೋಟಕ ಸಂಗ್ರಹ ಮಾಡಲಾಗಿದ್ದು, ಪೌರಾಣಿಕ ಶಿವ ಕ್ಷೇತ್ರದ ಬುಡದಲ್ಲೇ ಡೈನಾಮೆಟ್ ಇಟ್ಟು ಬಂಡೆ ಸ್ಟೋಟಿಸುತ್ತಾ ಇದ್ದಾರೆ. 

Mangaluru: ಕಾರಿಂಜೇಶ್ವರ ದೇವಾಲಯದ ತಪ್ಪಲಿನಲ್ಲಿ ಗಣಿಗಾರಿಕೆ, ಹಿಂ, ಜಾ.ವೇ ಬೃಹತ್ ಹೋರಾಟ

ಕಾರಿಂಜೇಶ್ವರ ದೇವಸ್ಥಾನದ ಸುತ್ತಮುತ್ತ ಕಲ್ಲು ಗಣಿಗಾರಿಕೆ ನಿಲ್ಲಿಸುವಂತೆ ಬೃಹತ್ ಪ್ರತಿಭಟನೆ ನಡೆದಿದೆ. ಈ ಪ್ರತಿಭಟನಾ ರ್ಯಾಲಿಯಲ್ಲಿ  ಹಿಂದೂ ಜಾಗರಣಾ ವೇದಿಕೆ ಮುಖಂಡ ಜಗದೀಶ್ ಕಾರಂತ್ (Jagadesh Karanth) ಪ್ರಚೋದನಕಾರಿ ಮಾತುಗಳನ್ನಾಡಿದ್ದಾರೆ.

' ಕಲ್ಲು ಗಣಿಗಾರಿಕೆ ನಿಲ್ಲಿಸಲು ಡಿ.21 ರವರೆಗೆ ಜಿಲ್ಲಾಧಿಕಾರಿಗೆ ಗಡುವು ಕೊಡ್ತೇವೆ. ಇಲ್ಲದೇ ಇದ್ದರೆ ಡಿ.21ರಂದು ಎಲ್ಲರೂ ಜಿಲ್ಲಾಧಿಕಾರಿ ಕಚೇರಿಗೆ ಲಗ್ಗೆಯನ್ನ ಹಾಕ್ತೇವೆ. ಅವನ ಕೊರಳು ಪಟ್ಟಿಯನ್ನ ಹಿಡೀತೀವಿ, ತಾಕತ್ತಿದ್ರೆ ಕಲ್ಲು ಗಣಿಗಾರಿಕೆ ನಿಲ್ಲಿಸು, ಇಲ್ಲಾಂದ್ರೆ ಟ್ರಾನ್ಸ್ಪರ್ ತೆಗೊಂಡು ಹೋಗು. ಜಿಲ್ಲಾ ಉಸ್ತುವಾರಿ ಮಂತ್ರಿಗೂ ಹೇಳ್ತೀವಿ, ಗಣಿಗಾರಿಕೆ ನಿಲ್ಲಿಸಿ, ಇಲ್ಲಾಂದ್ರೆ ರಾಜೀನಾಮೆ ಕೊಟ್ಟು ‌ಮನೆಗೆ ಹೋಗು, ಬಂಟ್ವಾಳ ಎಂಎಲ್ ಎಗೂ ಹೇಳ್ತೀವಿ, ಅದನ್ನ ನಿಲ್ಲಿಸು, ಇಲ್ಲಾಂದ್ರೆ ರಾಜೀನಾಮೆ ಕೊಡು' ಎಂದು ಎಚ್ಚರಿಸಿದ್ದಾರೆ. 

Video Top Stories