Hubli Riots: ಮುಸ್ಲಿಮರ ಪ್ರತಿಭಟನೆಗೆ ದಲಿತ ಮುಖಂಡನ ಸಾಥ್!
ಠಾಣೆ ಎದುರು ಮುಸ್ಲಿಮರ ಪರ ದೊಡ್ಡಮನಿ ಮಾತನಾಡಿದ್ದು ಯಾರೂ ಕೂಡ ಪ್ರತಿಭಟನೆ ಬಿಟ್ಟು ಕದಲದಿರಿ ಎಂದು ಕರೆ ನೀಡಿದ್ದಾರೆ
ಹುಬ್ಬಳ್ಳಿ (ಏ. 17): ಹುಬ್ಬಳಿ ಹಿಂಸಾಚಾರ ಬಳಿಕ ಖಾಕಿ ಅಲರ್ಟ್ ಆಗಿದ್ದು ಜಿಲ್ಲಾದ್ಯಂತ ಕಟ್ಟೆಚ್ಚರವಹಿಸಲಾಗಿದೆ. ನಗರದಾದ್ಯಂತ 24 ಗಂಟೆ 144 ಸೆಕ್ಷನ್ ಜಾರಿಗೆ ಕಮಿಷನರ್ ಅದೇಶ ಹೊರಿಡಿಸಿದ್ದಾರೆ. ಇನ್ನು ಈ ನುಡವೆ ಮುಸ್ಲಿಮರ ಪ್ರತಿಭಟನೆಗೆ ದಲಿತ ಮುಖಂಡ ಮಾರುತಿ ದೊಡ್ಡಮನಿ ಭಾಗಿಯಾಗಿದ್ದಾರೆ. ಠಾಣೆ ಎದುರು ಮುಸ್ಲಿಮರ ಪರ ದೊಡ್ಡಮನಿ ಮಾತನಾಡಿದ್ದು ಯಾರೂ ಕೂಡ ಪ್ರತಿಭಟನೆ ಬಿಟ್ಟು ಕದಲದಿರಿ ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಗುಜರಾತ್, ಉತ್ತರ ಪ್ರದೇಶ ಮಾದರಿ ಕಾನೂನು ಜಾರಿ: ನಳಿನ್ ಕುಮಾರ್ ಕಟೀಲ್
"ಪೋಲಿಸರು ನಿಮ್ಮ ಮೈಮುಟ್ಟಲಿ, ನಮ್ಮ ತಾಕತ್ತು ತೋರಿಸೋಣ, ನಮ್ಮ ಹೋರಾಟ ಬೆಂಗಳೂರು ದಿಲ್ಲಿವರೆಗೂ ತಲುಪಬೇಕು, ಪೊಲೀಸರಿಗೆ ಭಯಪಡೋದು ಬೇಡ, ಇದು ಅವರಪ್ಪನ ಜಹಾಗೀರ್ ಅಲ್ಲ, ನಾವು ಸುಮ್ಮನೆ ಕೈ ಕಟ್ಟಿ ಕೂರುವುದು ಬೇಡ್" ಎಂದು ಮಾರುತಿ ದೊಡ್ಡಮನಿ ಹೇಳಿದ್ದಾರೆ. ಇನ್ನು ಗಲಭೆ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಹಲವರನ್ನು ಬಂಧಿಸಲಾಗಿದೆ, ಕಾನೂನು ಉಲ್ಲಂಘಿಸಿದ್ರೆ ಕಠಿಣ ಕ್ರಮ ತೆಗೆಗುಕೊಳ್ಳಲಾಗುವುದು ಎಂದು ಕಮಿಷನರ್ ಲಾಬೂರಾಮ್ ಖಡಕ್ ಎಚ್ಚರಿಕೆ ನೀಡಿದ್ದಾರೆ