Asianet Suvarna News Asianet Suvarna News

ಹುಬ್ಬಳ್ಳಿ ಗಲಭೆ: ಭಾಷಣ ಮಾಡಿದ ವ್ಯಕ್ತಿ ಮೌಲ್ವಿಯಲ್ಲ, ವೇಷಧಾರಿ: ಮುಸ್ಲಿಂ ಮುಖಂಡ

 ರಾಜ್ಯದಲ್ಲಿ ಮಸೀದಿ ಹಾಗೂ ಮೌಲ್ವಿಗಳ ಸರ್ವೇಯಾಗಬೇಕು ಎಂದು ಬಿಜೆಪಿ ಶಾಸಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ

ಬೆಂಗಳೂರು (ಏ. 20):  ಹುಬ್ಬಳ್ಳಿ ಹಿಂಸಾಚಾರ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಸೀದಿ ಹಾಗೂ ಮೌಲ್ವಿಗಳ ಸರ್ವೇಯಾಗಬೇಕು ಎಂದು ಬಿಜೆಪಿ ಶಾಸಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮಸೀದಿಗಳಿಂದಲೇ ಈ ರೀತಿ ಪ್ರಚೋದನೆಯಾಗುತ್ತಿದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ ಘಟನೆಯ ದೃಶ್ಯಾವಳಿಗಳನ್ನು ಗಮನಿಸಿದಾಗ ಹಿಂಸಾಚಾರಕ್ಕ ಮೌಲ್ವಿಯೇ ಪ್ರಚೋದನೆ ನೀಡಿರುವುದು ಕಂಡು ಬರುತ್ತಿದೆ. ಹೀಗಾಗಿ ಮೌಲ್ವಿಯ ಹಿನ್ನೆಲೆಯನ್ನು ತನಿಖೆ ಮಾಡಬೇಕಾಗಿ ಬಿಜೆಪಿ ಶಾಸಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 

ಇದನ್ನೂ ಓದಿ: ಸ್ವಪಕ್ಷೀಯರಿಂದಲೇ ಅಸಮಾಧಾನ, ಆರಗ ಜ್ಞಾನೇಂದ್ರ ಖಾತೆ ಬದಲಾವಣೆ ಪಕ್ಕಾ?

ಇನ್ನು ಈ ಬೆನ್ನಲ್ಲೆ ಮಾತನಾಡಿರುವ ಮುಸ್ಲಿಂ ಮುಖಂಡ ರಿಯಾಜ್‌ ಅಹ್ಮದ್‌ " ಮಸೀದಿಗಳಲ್ಲಿ ಯಾವುದೇ ರೀತಿ ಪ್ರಚೋದನೆ ನೀಡೋದಿಲ್ಲ, ದ್ವೇಷ ಭಾಷಣ ಮಾಡುವ ಕಾರ್ಯ ನಡೆಯೋದಿಲ್ಲ, ಗಡ್ಡ ಬಿಟ್ಟವರೆಲ್ಲ ಮೌಲ್ವಿಯಾಗಲು ಸಾಧ್ಯವಿಲ್ಲ. ನಮ್ಮ ಮದರಸಾಗಳಲ್ಲಿ, ಮಸೀದಿಗಳಲ್ಲಿ ಇನ್ನೊಬ್ಬರನ್ನು ಗೌರವಿಸಲು ಕಲಿಸಲಾಗುತ್ತದೆ. ಹುಬ್ಬಳ್ಳಿಯಲ್ಲಿ ಮಾತನಾಡಿದವರು ಯಾರೋ ವೇಷಧಾರಿಯಾಗಿದ್ದಾರೆ, ಹೊರತು ಮೌಲ್ವಿ ಅಲ್ಲ " ಎಂದು ಹೇಳಿದ್ದಾರೆ. 

Video Top Stories