ಹುಬ್ಬಳ್ಳಿಯಲ್ಲಿ 150 ಕ್ಕೂ ಹೆಚ್ಚು ಮನೆ ಜಲಾವೃತ

ಹುಬ್ಬಳ್ಳಿಯಲ್ಲಿಯೂ ಮಳೆರಾಯ ಅಬ್ಬರಿಸುತ್ತಿದ್ದಾನೆ. ಗಣೇಶ ನಗರ, ಆನಂದ ನಗರದಲ್ಲಿ ನೀರೋ ನೀರು. 150 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಭಯದಿಂದ ಜನ ರಾತ್ರಿ ಇಡೀ ಜಾಗರಣೆ ಮಾಡಿದ್ದಾರೆ. ಮನೆಯ ಸಾಮಾನು, ಸರಂಜಾಮುಗಳು ನೀರಲ್ಲಿ ಮುಳುಗಡೆಯಾಗಿವೆ.

First Published Oct 21, 2020, 11:18 AM IST | Last Updated Oct 21, 2020, 11:20 AM IST

ಬೆಂಗಳೂರು (ಅ. 21): ಹುಬ್ಬಳ್ಳಿಯಲ್ಲಿಯೂ ಮಳೆರಾಯ ಅಬ್ಬರಿಸುತ್ತಿದ್ದಾನೆ. ಗಣೇಶ ನಗರ, ಆನಂದ ನಗರದಲ್ಲಿ ನೀರೋ ನೀರು. 150 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಭಯದಿಂದ ಜನ ರಾತ್ರಿ ಇಡೀ ಜಾಗರಣೆ ಮಾಡಿದ್ದಾರೆ. ಮನೆಯ ಸಾಮಾನು, ಸರಂಜಾಮುಗಳು ನೀರಲ್ಲಿ ಮುಳುಗಡೆಯಾಗಿವೆ. ಮನೆಯೊಳಗೂ ಇರಲಾಗದೇ, ಹೊರಗಡೆಯೂ ಇರಲಾಗದೇ ಜನ ಪರದಾಡುತ್ತಿದ್ದಾರೆ. ಮಹಾನಗರ ಪಾಲಿಕೆಯ ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದ ಇಷ್ಟೆಲ್ಲಾ ಅನಾಹುತಗಳಾಗಿವೆ. 

ಬೆಂಗಳೂರಿನಲ್ಲಿ ಭಾರೀ ಮಳೆ; ಇನ್ನೂ 3 ದಿನ ಮುಂದುವರೆಯುವ ಸಾಧ್ಯತೆ