
ಯಾದಗಿರಿಯಲ್ಲಿ ಭಾರೀ ಮಳೆ: ಗುರುಸಣಗಿ ಬ್ಯಾರೇಜ್‌ನ 4 ಗೋಡೆಗಳು ಜಖಂ
ಯಾದಗಿರಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಗುರುಸಣಗಿ ಬ್ಯಾರೇಜ್‌ಗೆ ಅಳವಡಿಸಿರುವ 4 ಗೋಡೆಗಳಿಗೆ ಹಾನಿಯಾಗಿದೆ. ಕಳೆದ ವರ್ಷವಷ್ಟೇ ಈ ಗೋಡೆಗಳನ್ನು ನಿರ್ಮಿಸಲಾಗಿತ್ತು. ಅದೀಗ ಜಖಂ ಆಗಿದೆ.
ಬೆಂಗಳೂರು (ಸೆ. 21): ಯಾದಗಿರಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಗುರುಸಣಗಿ ಬ್ಯಾರೇಜ್‌ಗೆ ಅಳವಡಿಸಿರುವ 4 ಗೋಡೆಗಳಿಗೆ ಹಾನಿಯಾಗಿದೆ. ಕಳೆದ ವರ್ಷವಷ್ಟೇ ಈ ಗೋಡೆಗಳನ್ನು ನಿರ್ಮಿಸಲಾಗಿತ್ತು. ಅದೀಗ ಜಖಂ ಆಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಯಾದಗಿರಿ ಮಾತ್ರವಲ್ಲ ರಾಜ್ಯದ ಬಹುತೇಕ ಕಡೆ ಇದೇ ರೀತಿ ಅವಾಂತರಗಳಾಗಿವೆ. ಎಲ್ಲಾ ಕಡೆ ಭಾರೀ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂಗಾರು ಅವಧಿಯಲ್ಲಿ ದೇಶದಲ್ಲಿಯೇ ಅತ್ಯಧಿಕ ಮಳೆಯಾಗುತ್ತಿದೆ. ಜೂನ್ 1 ರಿಂದ ಸೆ. 20 ರವರೆಗೆ ವಾಡಿಕೆಯ 791 ಮಿಮಿ ಬದಲು 911 ಮಿಮಿ ಮಳೆ ಸುರಿದಿದೆ. ಅಂದರೆ ಶೇ. 15 ರಷ್ಟು ಮಳೆ ಬಿದ್ದಿದೆ.