Asianet Suvarna News Asianet Suvarna News

ಸಿಲಿಕಾನ್‌ ಸಿಟಿಯಲ್ಲಿ ತುಂತುರು ಮಳೆ: ಜನರ ಪರದಾಟ

ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆ| ಮೋಡ ಮುಸುಕಿದ ವಾತಾವರಣ| ಆಫೀಸ್‌ಗಳಿಗೆ ಹೋಗಲು ಜನರ ಪರದಾಟ| ಜನಜೀವನ ಸಂಪೂರ್ಣ ಅಸ್ತವ್ಯಸ್ತ| 

ಬೆಂಗಳೂರು(ನ.26): ನಿವಾರ್‌ ಚಂಡಮಾರುತ ಎಫೆಕ್ಟ್‌ನಿಂದ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಬೆಳಿಗ್ಗೆಯಿಂದಲೇ ತುಂತುರು ಮಳೆ ಬೀಳುತ್ತಿದೆ. ಇದರಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ಜನರು ಆಫೀಸ್‌ಗಳಿಗೆ ಹೋಗಲು ಪರದಾಡಿದ್ದಾರೆ.

ನಿವಾರ್‌ ಚಂಡಮಾರುತ ಎಫೆಕ್ಟ್‌: ಚಿಕ್ಕಬಳ್ಳಾಪುರದಲ್ಲೂ ಭಾರೀ ಮಳೆ

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಾಹನ ಸವಾರರು ಇನ್ನಿಲ್ಲದ ಪರದಾಟು ಅನುಭವಿಸಿದ್ದಾರೆ. ನಿವಾರ್‌ ಚಂಡಮಾರುತದ ಎಫೆಕ್ಟ್‌ನಿಂದಾಗಿ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದೆ.