ವೇದಿಕೆ ಮೇಲೆಯೇ Govind Karjol ಮತ್ತು D Sudhakar ಮಾತಿನ ಜಟಾಪಟಿ

Share this Video
  • FB
  • Linkdin
  • Whatsapp

76ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಹಿನ್ನೆಲೆ. ವೇದಿಕೆ ಮೇಲೆಯೇ ಕಾಂಗ್ರೆಸ್ ಸಚಿವ, ಬಿಜೆಪಿ ಸಂಸದರಿಂದ ಮಾತಿನ ಜಟಾಪಟಿ. ಕೈ ಸಚಿವ ಡಿ.ಸುಧಾಕರ್, ಬಿಜೆಪಿ ಸಂಸದ ಗೋವಿಂದ ಕಾರಜೋಳ. ಭದ್ರಾ ಮೇಲ್ದಂಡೆ ವಿಚಾರಕ್ಕೆ ಇಬ್ಬರ ಮಧ್ಯೆ ಮಾತಿನ ಚಕಮಕಿ. ಪ್ರೆಸ್ ನವರನ್ನ ಕರಿ ಸತ್ಯ ಹೇಳ್ತೀನಿ ಎಂದ ಕಾರಜೋಳ. ನಾನು ನೀರಾವರಿ ಮಂತ್ರಿ ಆಗಿದ್ದಾಗ 5700ಕೋಟಿ ನೀರಾವರಿಗೆ ಕೊಟ್ಟಿದ್ದೀನಿ. ಎರಡನೇ ವರ್ಷದಲ್ಲಿ ೫೭೦೦ ಕೋಟಿ ಕೊಟ್ಟಿದ್ದೀವಿ. ಮೊದಲನೇ ವರ್ಷ ೩,೩೦೦ ಕೋಟಿ, ಎರಡನೇ ವರ್ಷ ೨,೪೦೦ ಕೋಟಿ ಕೊಟ್ಟಿದೀವಿ. ಸಿದ್ದರಾಮಯ್ಯ ಸರ್ಕಾರ ಬಂದ್ಮೇಲೆ ಏನು ಕೊಟ್ಟಿಲ್ಲ. ಮೊದಲು ನೀವು ೫೩೦೦ ಕೋಟಿ ಕೇಂದ್ರದಿಂದ ತಂದ್ಮೇಲೆ ಅದಕ್ಕೆ ಮಹತ್ವ ಎಂದ ಸುಧಾಕರ್. ತಮಾಷೆಗೆ ಕೈ ಹಿಡಿದು ಎಳೆದು ಮೊದಲು ಕೇಳಪ್ಪ ಇಲ್ಲಿ ಎಂದ ಕಾರಜೋಳ. ಕೇಂದ್ರ ಬಜೆಟ್ ನಲ್ಲಿ ಕೊಟ್ಟ ಮಾತಿನಂತೆ ಮೊದಲು ಕೊಡಿ ಎಂದ ಸುಧಾಕರ್. ೨೦೦೭-೮ ರಲ್ಲಿ ಭದ್ರಾ ಪ್ರಾಜೆಕ್ಟ್ ಶುರುವಾಗಿದೆ ಎಂದ ಕಾರಜೋಳ. ನಾವೇ ಶುರು ಮಾಡಿದ್ದು ನಾನೇ ಇದ್ನಲ್ಲ ಎಂದ ಸಚಿವ ಸುಧಾಕರ್, ನೀನು ನನ್ನ ಜೊತೇಲೆ ಇದ್ದೆ ಅದಕ್ಕೆ ಹೇಳ್ತಿದೀನಿ ಕೇಳಿಲ್ಲಿ ಎಂದ ಕಾರಜೋಳ. ೫೩೦೦ ಕೋಟಿ ತರೋವರೆಗೂ ಬೇರೆ ಮಾತುಗಳು ಅಪ್ರಸ್ತುತ ಎಂದ ಸಚಿವ ಸುಧಾಕರ್. ಸಿದ್ದರಾಮಯ್ಯ ಭದ್ರಾ ಯೋಜನೆಗೆ ಬಿಡಿಗಾಸು ಕೂಡ ಕೊಟ್ಟಿಲ್ಲ. ನಾನು ೫೭೦೦ ಕೋಟಿ ಕೊಟ್ಟಿದೀನಿ ನೀನು ೫೦೦೦ ಕೋಟಿ ತಗೊಂಡ್ ಬಾ ಎಂದ ಕಾರಜೋಳ. ನೀವೆ ದುಡ್ಡೇ ಇಟ್ಟಿಲ್ಲ ಸರ್ ಎಂದ ಸುಧಾಕರ್. ಏ ನಿನ್ನ ಮರ್ಯಾದೆ ತೆಗಿತೀನಿ ನಾನು ಗೊತ್ತಿರಲಿ ಎಂದೇಳಿ ತೆರಳಿದ ಕಾರಜೋಳ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video