Haveri: ಹಾವೇರಿಯಲ್ಲಿ ಅಕ್ಷರ ಜಾತ್ರೆ: 'ಏಲಕ್ಕಿ ಮಾಲೆ' ಖರೀದಿಗೆ ಮನಸ್ಸು ಮಾಡದ ಜಿಲ್ಲಾಡಳಿತ

ಹಾವೇರಿಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಕೊರಳೇರಲು ಏಲಕ್ಕಿ ಮಾಲೆಗಳು ರೆಡಿಯಾಗಿದೆ. ಆದರೆ ಜಿಲ್ಲಾಡಳಿತ ಮಾತ್ರ ಐತಿಹಾಸಿಕ ಏಲಕ್ಕಿ ಮಾಲೆ ಖರೀದಿಗೆ ಮನಸ್ಸು ತೋರಿಲ್ಲ.
 

Share this Video
  • FB
  • Linkdin
  • Whatsapp

ಏಲಕ್ಕಿ ಕಂಪಿನ ನಗರ ಹಾವೇರಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗುತ್ತಿದೆ. ನುಡಿ ಜಾತ್ರೆಗೆ ಎಲ್ಲಾ ರೀತಿಯ ಸಿದ್ಧತೆಗಳು ವೇಗ ಪಡೆದುಕೊಂಡಿವೆ. ನಗರದಲ್ಲಿ ಸಮ್ಮೇಳನ ನಡೆಯುತ್ತಿರುವುದು ಏಲಕ್ಕಿ ಮಾಲೆ ತಯಾರಕರೂ ಖುಷಿಯಾಗಿದ್ದಾರೆ. ಸಾಹಿತಿಗಳು, ಮಠಾಧೀಶರು, ಜನಪ್ರತಿನಿಧಿಗಳ ಕೊರಳನ್ನೇರಲು ಏಲಕ್ಕಿ ಮಾಲೆಗಳು ಸಿದ್ಧವಾಗುತ್ತಿವೆ. ಹಾವೇರಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಟವೇಗಾರ ಕುಟುಂಬ ಏಲಕ್ಕಿ ಮಾಲೆಗಳ ತಯಾರಿಕೆಯಲ್ಲಿ ತೊಡಗಿಕೊಂಡಿದೆ. ಆದರೆ ಸಮ್ಮೇಳನ ಹಾವೇರಿಯಲ್ಲೇ ನಡೆದರೂ ಇದುವರೆಗೂ ಏಲಕ್ಕಿ ಮಾಲೆ ತಯಾರಕರಿಗೆ ಹಾವೇರಿ ಜಿಲ್ಲಾಡಳಿತ, ಕನ್ನಡ ಸಾಹಿತ್ಯ ಪರಿಷತ್ ಪ್ರೋತ್ಸಾಹವೇ ಸಿಕ್ಕಿಲ್ಲ. ಈ ಕುರಿತು ತಮ್ಮ ಬೇಸರ ಹೊರ ಹಾಕಿದ್ದಾರೆ ಮಾಲೆ ತಯಾರಕರು.

Related Video