ಚಾರ್ಮಾಡಿ ಘಾಟ್ ಕಾವಲಿಗೆ ನಿಂತಿರುವ ದೇವಿಯ ಪವಾಡ: ವಾಹನ ಸವಾರರಿಗೆ ಮಹಾತಾಯಿ ಶ್ರೀರಕ್ಷೆ!
*ಈ ಘಾಟ್ ರಸ್ತೆಯಲ್ಲಿ ವಾಹನ ಓಡಿಸೋದೇ ದೊಡ್ಡ ಸವಾಲು..!
*ಹಾವಿನಾಕಾರದ ರಸ್ತೆಯಲ್ಲಿ ನಡೆಯುತ್ತಲೇ ಇರುತ್ತೆ ಅಪಘಾತ..!
*ವಾಹನ ಸವಾರರಿಗೆ ಕೊಡ್ತಾಳೆ ದೇವಿ ಶ್ರೀರಕ್ಷೆ..!
ಬೆಂಗಳೂರು (ಮೇ 14): ಒಂದಕ್ಕಿಂತ ಒಂದು ಭೀಕರ ಅಪಘಾತಗಳು.. ನೋಡ್ತಾ ನೋಡ್ತಾನೇ ರಸ್ತೆಯಲ್ಲಿ ಕಂಟ್ರೋಲ್ ತಪ್ಪಿದ ವಾಹನಗಳು. ಇದೆಲ್ಲ ಚಿಕ್ಕ ಚಿಕ್ಕ ಸ್ಯಾಂಪಲ್. ಇದಕ್ಕಿಂತಲೂ ಭೀಕರ ಅಪಘಾತಗಳು ಘಾಟ್ದಂತ ಕಿರಿದಾದ ಇಕ್ಕಟ್ಟಾದ ರಸ್ತೆಯಲ್ಲಿ ಪ್ರತಿನಿತ್ಯ ನಡೆಯುತ್ತಲೇ ಇರುತ್ತೆ. ಅದು ಹಾವಿನಾಕಾರದ ಅಂಕುಡೊಂಕಾದ ರಸ್ತೆಗಳು.. ಕಡಿದಾದ ಗುಡ್ಡಗಾಡಿನ ರಸ್ತೆ. ಇಂತಹ ರಸ್ತೆಗಳನ್ನ ಘಾಟ್ ಸೆಕ್ಷನ್ ಅಂತ ಸಹ ಹೇಳಲಾಗುತ್ತೆ. ಇಲ್ಲಿ ವಾಹನ ಓಡಿಸೋದೇ ಚಾಲಕನಿಗೆ ಸವಾಲು. ಆದರೂ ವಾಹನ ಸವಾರರು ಜವರಾಯನಿಗೆನೇ ಚಮಕ್ ಕೊಟ್ಟು ಬಿಂದಾಸ್ ಆಗಿ ವಾಹನ ಓಡಿಸ್ತಾರೆ.
ಎಷ್ಟೋ ಜನರು ಘಾಟ್ ಸೆಕ್ಷನ್ ರಸ್ತೆ ಅಂದ್ರೆ ಸಾಕು, ಅಲ್ಲಿ ಹೋದ್ರೆ ಸಾವೇ ಫಿಕ್ಸ್ ಅಂತ ಅಂದ್ಕೊಂಡು ಬಿಡ್ತಾರೆ. ಅಂತಹ ಡೆಡ್ಲಿ ಡೆಂಜರಸ್ ರಸ್ತೆಗಳು ಅವು. ಆದರೆ ಆ ಒಂದು ಘಾಟ್ ರಸ್ತೆ ಇದೆ. ಅಲ್ಲಿ ಅಪಘಾತಗಳೇ ಸಂಭವಿಸೋದಿಲ್ಲವಂತೆ. ಅಲ್ಲಿರೋ ಅಗೋಚರ ಶಕ್ತಿಯೊಂದು ವಾಹನ ಸವಾರರಿಗೆ ಶ್ರಿರಕ್ಷೆಯಂತೆ ಕಾಪಾಡ್ತಿದೆ. ಆ ಶಕ್ತಿಯ ಹೆಸರೇ ಗುಳಿಗೆಮ್ಮ ದೇವಿ.
ಇದನ್ನೂ ಓದಿ:
ಎತ್ತ ನೋಡಿದ್ರೂ ಹಸಿರ ಸಿರಿಯ ಸೊಬಗು, ಹತ್ತಿರ ಹೋಗಿ ನೋಡಿದ್ರೆ ಊಹಿಸಲು ಅಸಾಧ್ಯವಾದಂತಹ ಆಳವಾದ ಪ್ರಪಾತ. ದಟ್ಟಾರಣ್ಯದಿಂದ ಕೂಡಿರುವ ಕಣಿವೆ ಚಾರ್ಮಾಡಿ ಘಾಟ್ ಇರುವುದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ವ್ಯಾಪ್ತಿಯಲ್ಲಿ. ಮೊದಲೇ ಸಾಕಷ್ಟು ತಿರುವುಗಳಿಂದ ಕೂಡಿರುವ ಧರ್ಮಸ್ಥಳದ ಮಾರ್ಗವಾಗಿರುವ ಕೊಟ್ಟಿಗೆರೆಹಾರ ಗ್ರಾಮದಿಂದ ಚಾರ್ಮಾಡಿವರೆಗೂ ಘಾಟ್ ಪ್ರದೇಶವನ್ನು ಕಾಣಬಹುದಾಗಿದೆ.
ಬೇಸಿಗೆ ಕಾಲವಾದರೆ ಪರವಾಗಿಲ್ಲ.. ರಸ್ತೆಗಳು ಒದ್ದೆಯಾಗಿರುವುದಿಲ್ಲ.. ಕೊಂಚ ಮಟ್ಟಿಗೆ ನಿರಾತಂಕವಾಗಿ ವಾಹನಗಳನ್ನ ಓಡಿಸಬಹುದು. ಆದರೆ ಮಳೆಗಾಲ ಚಳಿಗಾಲದಲ್ಲಿ ವಾತಾವರಣ ಭಯಂಕರವಾಗಿರುತ್ತೆ. ಇದೇ ಕಾರಣಕ್ಕೆ ಮಳೆಗಾಲದಲ್ಲಿ ರಸ್ತೆ ಸಂಚಾರಕ್ಕೆ ಕೆಲದಿನಗಳು ಬ್ರೇಕ್ ಹಾಕಿರುತ್ತಾರೆ. ಕಾರಣ ಒಂದೇ ಸಮನೆ ಸುರಿಯೋ ಮಳೆಯಿಂದಾಗಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿತ, ರಸ್ತೆಗೆ ಮಣ್ಣು ಬೀಳುವುದರಿಂದ ಅನಾಹುತ ಸಂಭವಿಸೋ ಸಾಧ್ಯತೆಗಳು ಹೆಚ್ಚಾಗಿರುತ್ತೆ.
ಚಾರ್ಮಾಡಿ ಘಾಟನ್ ಈ ಒಂದು ಸ್ಥಳದಲ್ಲಿ ಮಾತ್ರ ಇನ್ನೂವರೆಗೂ ಅಂಥಹದ್ಯಾವುದು ಘಟನೆಯೇ ಸಂಭವಿಸಿಲ್ಲ. ಅದು ಹಗಲಿನ ಸಮಯವಾದರೂ ಅಷ್ಟೆ. ನಡುರಾತ್ರಿಯ ಸಮಯವಾದರೂ ಅಷ್ಟೆ.. ಇಲ್ಲೂ ಯಾವ ದುರಂತಗಳೇ ಸಂಭವಿಸಿಲ್ಲ. ಇದಕ್ಕೆ ಕಾರಣ ದೇವಿಯ ಪವಾಡ ಅಂತ ಸ್ಥಳಿಯರು ಹೇಳುತ್ತಾರೆ. ಈ ಕುರಿತ ಒಂದು ವರದಿ ಇಲ್ಲಿದೆ